ಜೆಡಿಎಸ್ ಕಚೇರಿ ವಿವಾದ: ಸುಪ್ರೀಂನಲ್ಲಿ ವಿಚಾರಣೆ
ನವದೆಹಲಿ: ಜೆಡಿಎಸ್ ಕಚೇರಿ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಸದ್ಯದಲ್ಲೇ ತೀರ್ಪು ಹೊರಬೀಳು ಸಾಧ್ಯತೆ ಇದೆ.
ಶುಕ್ರವಾರ ಸುಪ್ರೀಂ ಕೋರ್ಟ್ನಲ್ಲಿ ಜೆಡಿಎಸ್ ಕಚೇರಿ ವಿವಾದದ ಬಗ್ಗೆ ನ್ಯಾಯಾಮೂರ್ತಿ ರಾಧಾಕೃಷ್ಣನ್ ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ಸುಪ್ರೀಂ ನ್ಯಾಯಾಧೀಶರು ಕಚೇರಿ ತೆರವು ಮಾಡದ ಬಗ್ಗೆ ಜೆಡಿಎಸ್ ವಕೀಲರನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿ ಇರುವ ಸ್ಥಳ ಕಾಂಗ್ರೆಸ್ಗೆ ಸೇರಿದ್ದರಿಂದ 3 ತಿಂಗಳೊಳಗೆ ಬಿಟ್ಟು ಕೊಡುವಂತೆ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಜೆಡಿಎಸ್ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸುತ್ತಿರುವ ರಾಧಕೃಷ್ಣನ್, ಅರ್ಜಿ ವಜಾಗೊಳಿಸಿದರೆ ಕಚೇರಿ ಖಾಲಿ ಮಾಡಲು ಎಷ್ಟು ಕಾಲಾವಕಾಶ ಬೇಕು? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿದ ಜೆಡಿಎಸ್ ಪರ ವಕೀಲ ಗೋಪಾಲ ಸುಬ್ರಹ್ಮಣ್ಯ, ವರ್ಷದ ಕೊನೆವರೆಗೆ ಕಾಲವಕಾಶ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
1954ರಲ್ಲಿ ಕಟ್ಟಡ ನಿರ್ಮಾಣ ಆಯಿತು. ನಂತರ ಕಾಂಗ್ರೆಸ್ ಇಬ್ಭಾಗವಾದ ಪರಿಣಾಮ ಜೆಡಿಎಸ್ ಈ ಜಾಗ ಪಡೆದುಕೊಂಡಿತು. ಆದರೆ 1984ರಲ್ಲಿ ಈ ವಿರುದ್ಧ ಕಾಂಗ್ರೆಸ್ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ ಹೈಕೋರ್ಟ್ ಈ ಜಾಗವನ್ನು ಬಿಟ್ಟುಕೊಡುವಂತೆ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸುತ್ತೇವೆ ಎಂದು ಜೆಡಿಎಸ್ ಹೇಳಿತ್ತು.