ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಭಾರತಕ್ಕೆ ತೆರಳಲು ದೇವಯಾನಿಗೆ ಅಮೆರಿಕ ಅನುಮತಿ

ವೀಸಾ ವಂಚನೆ ಆರೋಪ ಎದುರಿಸುತ್ತಿರುವ ಉಪರಾಯಭಾರಿ ದೇವಯಾನಿ ಖೋಬ್ರಾಗಡೆ ಅವರಿಗೆ ಭಾರತಕ್ಕೆ ಹಿಂದಿರುಗಲು..

Mainashree
Updated On : 10 Jan 2014, 2:00 am

ನ್ಯೂಯಾರ್ಕ್: ವೀಸಾ ವಂಚನೆ ಆರೋಪ ಎದುರಿಸುತ್ತಿರುವ ಉಪರಾಯಭಾರಿ ದೇವಯಾನಿ ಖೋಬ್ರಾಗಡೆ ಅವರಿಗೆ ಭಾರತಕ್ಕೆ ಹಿಂದಿರುಗಲು ಅಮೆರಿಕ ಅನುಮತಿ ನೀಡಿದೆ.

ಭಾರತಕ್ಕೆ ಮರಳಲು ಅಮೆರಿಕ ಅವಕಾಶ ಕೊಟ್ಟಿರುವುದು ಬಂಧನದ ಭೀತಿಯಲ್ಲಿದ್ದ ದೇವಯಾನಿ ಅವರು ನಿಟ್ಟುಸಿರು ಬಿಟ್ಟಂತಾಗಿದೆ.

ದೇವಯಾನಿ ಪ್ರಕರಣದಲ್ಲಿ ಅಮೆರಿಕ ತೋರುತ್ತಿರುವ ವರ್ತನೆಗೆ ಭಾರತಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಭಾರತದ ಮನವಿಗೆ ಸಮ್ಮತಿ ಸೂಚಿಸಿದ್ದಾರೆ. ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಮುಂದುವರೆಸುವ ನಿಟ್ಟಿನಲ್ಲಿ ರಾಜತಾಂತ್ರಿಕ ವಿನಾಯಿತಿ ಆಧಾರದಲ್ಲಿ ದೇವಯಾನಿಗೆ ಅನುಮತಿ ನೀಡಲಾಗಿದೆ. ಆದರೆ, ಮುಂದಿನ ವಿಚಾರಣೆಗಳಿಗೆ ದೇವಯಾನಿ ಹಾಜರಾಗಬೇಕಾಗುತ್ತದೆ ಎಂದು ಅಮೆರಿಕಾ ತಿಳಿಸಿದೆ.

ದೇವಯಾನಿ ಪ್ರಕರಣ ಸಂಬಂಧಿಸಿದಂತೆ ಭಾರತದ ಮನವಿಗೆ ಅಮೆರಿಕ ಒಪ್ಪಿಗೆ ಸೂಚಿಸಿದೆ. ಭಾರತದ ಮೇಲಿನ ವಿಶ್ವಾಸದಿಂದ ದೇವಯಾನಿ ಅವರನ್ನು ಸ್ವದೇಶಕ್ಕೆ ಮರಳಲು ಅವಕಾಶ ನೀಡಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ದೇವಯಾನಿ ಭಾರತಕ್ಕೆ ಮರಳಿದರು ಪ್ರಕರಣವನ್ನು ಕೈಬಿಡುವುದಿಲ್ಲ. ಒಂದು ವೇಳೆ ಅವರು ಮತ್ತೇ ಯಾವುದೆ ಅನುಮತಿ ಇಲ್ಲದೇ ಅಮೆರಿಕಾಗೆ ಬಂದರೆ ಪ್ರಕರಣದ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಈ ಮಧ್ಯೆ, ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಕಾನೂನಿನ ಪ್ರಕಾರ ಹೋರಾಡುತ್ತೇನೆ ಎಂದು ದೇವಯಾನಿ ಹೇಳಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement