ಲಾಲು ಆಡಳಿತದಂತೆ ಎಎಪಿ ಸರ್ಕಾರ: ಜೈರಾಮ್
ಹಿಂದೊಮ್ಮೆ ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಅವರ ಆಡಳಿತ ಇದ್ದಂತೆ ಈಗಿನ ಕೇಜ್ರಿವಾಲ್ ಸರ್ಕಾರ ಎಂದು...
ನವದೆಹಲಿ: ಹಿಂದೊಮ್ಮೆ ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಅವರ ಆಡಳಿತ ಇದ್ದಂತೆ ಈಗಿನ ಕೇಜ್ರಿವಾಲ್ ಸರ್ಕಾರ ಎಂದು ಕೇಂದ್ರ ಸಚಿವ ಜೈರಾಮ್ ರಮೇಶ್ ಶುಕ್ರವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೇಜ್ರಿವಾಲ್ ಸರ್ಕಾರ, ಲಾಲು ಅವರ ಆಡಳಿತವನ್ನು ಮತ್ತೆ ನೆನಪಿಗೆ ತಂದಿದೆ. ಭ್ರಷ್ಟಾಚಾರ ವಿರುದ್ದ ಹೋರಾಡುವುದು, ಜನತಾ ದರ್ಬಾರ್, ಬಡ ಮಕ್ಕಳಿಗೆ ಸ್ನಾನ ಮತ್ತು ಹೇರ್‌ಕಟ್ ಉಚಿತ ಇತ್ಯಾದಿ ಭರವಸೆಗಳು ಲಾಲು ಸರ್ಕಾರವನ್ನು ನೆನಪಿಸಿದೆ ಎಂದು ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ.
ಲಾಲು ಆಡಳಿತದಲ್ಲಿದ್ದಾಗ ವಿರೋಧ ಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದರು. ವಿರೋಧ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿದೆ, ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದರು.
ಆದರೆ ಈಗ ಅಂತಹದ್ದೇ ಹೇಳಿಕೆಗಳನ್ನು ಆಮ್ ಆದ್ಮಿ ಪಕ್ಷದ ನಾಯಕರು ನೀಡುತ್ತಿದ್ದಾರೆ. ಅದೇ ರೀತಿಯ ಭರವಸೆಗಳನ್ನು ನೀಡುತ್ತಾ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರುತ್ತಿರುವುದು ವಿಪರ್ಯಾಸ ಎಂದು ಅವರು ತಿಳಿಸಿದ್ದಾರೆ.