ಕುಮಾರ್ ವಿಶ್ವಾಸ್ಗೆ ಮೊಟ್ಟೆ ಎಸೆದು ಆಕ್ರೋಶ
ಲಕ್ನೋದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಆಮ್ ಆದ್ಮಿ ಪಕ್ಷದ ನೇತಾರ ಕುಮಾರ್ ವಿಶ್ವಾಸ್ ಮೇಲೆ ಮೊಟ್ಟೆ ಎಸೆದ ಪ್ರಸಂಗ...
ಲಕ್ನೋ: ಲಕ್ನೋದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಆಮ್ ಆದ್ಮಿ ಪಕ್ಷದ ನೇತಾರ ಕುಮಾರ್ ವಿಶ್ವಾಸ್ ಮೇಲೆ ಮೊಟ್ಟೆ ಎಸೆದ ಪ್ರಸಂಗ ವರದಿಯಾಗಿದೆ.
ವಿಶ್ವಾಸ್ ಅವರ ಕವನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಪ್ರತಿಭಟಿಸಿದ ಕೆಲವರು ಮೊಟ್ಟೆ ಎಸೆದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವಾಸ್, ಆಮ್ ಆದ್ಮಿ ಪಕ್ಷವನ್ನು ಬೆದರಿಸಲು ವಿಪಕ್ಷಗಳ ಮಾಡಿದ ಹುನ್ನಾರ ಎಂದು ಹೇಳಿದ್ದಾರೆ.
ಆದಾಗ್ಯೂ, ವಿಶ್ವಾಸ್ ಭದ್ರತೆಯನ್ನು ನಿರಾಕರಿಸಿದ್ದಾರೆ. ತಾನು ರಾಜಕಾರಣಕ್ಕೆ ಬರುವ ಮುನ್ನವೇ ವಿವಿಧ ಕವಿ ಸಮ್ಮೇಳನಗಳಲ್ಲಿ ಆ ಕವನವನ್ನು ವಾಚಿಸಿದ್ದೆ. ನಾನು ಯಾರನ್ನೂ ಉದ್ದೇಶಪೂರ್ವಕವಾಗಿ ನೋಯಿಸಿಲ್ಲ. ಕವಿತೆಗೆ ಸಂಬಂಧಪಟ್ಟಂತೆ ನಾನು ಈ ಮೊದಲೇ ಕ್ಷಮೆಯಾಚಿಸಿದ್ದೇನೆ ಎಂದು ಹೇಳಿದ್ದಾರೆ.