ಕೇಜ್ರಿವಾಲ್‌ಗೆ 'ಜೆಡ್' ಭದ್ರತೆ
ತನಗ್ಯಾವುದೇ ಭದ್ರತೆ ಬೇಡ ಎಂದು ಹೇಳುವ ಮೂಲಕ ಭದ್ರತೆ ನಿರಾಕರಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ...
ಉತ್ತರ ಪ್ರದೇಶ: ತನಗ್ಯಾವುದೇ ಭದ್ರತೆ ಬೇಡ ಎಂದು ಹೇಳುವ ಮೂಲಕ ಭದ್ರತೆ ನಿರಾಕರಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಉತ್ತರ ಪ್ರದೇಶ ಸರ್ಕಾರ ಜೆಡ್ ಭದ್ರತೆಯನ್ನೊದಗಿಸಲು ತೀರ್ಮಾನಿಸಿದೆ.
ದೆಹಲಿಗೆ ಸಮೀಪವಿರುವ ಕೌಶಂಬಿಯಲ್ಲಿ ವಾಸಿಸುತ್ತಿರುವ ಕೇಜ್ರಿವಾಲ್‌ರಿಗೆ ಜೆಡ್ ಭದ್ರತೆ ನೀಡುವ ಬಗ್ಗೆ ರಾಜ್ಯ ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಎ.ಕೆ ಗುಪ್ತ ಮತ್ತು ಡಿಜಿಪಿ ರಿಜ್ವಾನ್ ಅಹ್ಮದ್ ಗುರುವಾರವೇ ತೀರ್ಮಾನ ಕೈಗೊಂಡಿದ್ದರು.
ದೆಹಲಿ ಮುಖ್ಯಮಂತ್ರಿ ಭದ್ರತೆಯನ್ನು ನಿರಾಕರಿಸಿದ್ದರೂ ಸರ್ಕಾರದ ಉನ್ನತ ಪದವಿ ಹೊಂದಿರುವ ಅವರಿಗೆ ಭದ್ರತೆಯನ್ನೊದಗಿಸುವುದು ಉತ್ತರ ಪ್ರದೇಶ ಪೊಲೀಸರ ಕರ್ತವ್ಯ ಎಂದು ಅಡಿಷನಲ್ ಡಿಜಿಪಿ ಒ.ಪಿ. ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಉತ್ತರ ಪ್ರದೇಶ ಪೊಲೀಸರು ದೆಹಲಿ ಪೊಲೀಸರಿಗೆ ತಿಳಿಸಿದ್ದು, ಇದಕ್ಕೆ ಬೇಕಾದ ಸಲಹೆಗಳನ್ನು ಗಾಜಿಯಾಬಾದ್‌ನಲ್ಲಿ ನೀಡಲಾಗುವುದು.
ಜೆಡ್ ಭದ್ರತೆಯ ಪ್ರಕಾರ ಕೇಜ್ರಿವಾಲ್‌ರಿಗೆ ಮೂವರು ಸಬ್ ಇನ್ಸ್‌ಪೆಕ್ಟರ್, 7 ಹೆಡ್ ಕಾನ್ಸ್ಟೇಬಲ್‌ಗಳು, 10 ಪೊಲೀಸ್ ಪೇದೆ ಮತ್ತು ಇಬ್ಬರು ಚಾಲಕರು 24/7 ಸೇವೆಸಲ್ಲಿಸಲಿದ್ದಾರೆ.