ಮುಂಬೈ ಡ್ಯಾನ್ಸರ್ ರೇಪ್ ಕೇಸ್: ನಾಲ್ವರ ಬಂಧನ
ಹೈದ್ರಾಬಾದ್: ಹೊಸ ವರ್ಷಾಚರಣೆಯಂದು ಮುಂಬೈ ಡ್ಯಾನ್ಸರ್ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ನ್ಯೂ-ಇಯರ್ ಪಾರ್ಟಿಗಾಗಿ ನೃತ್ಯಮಾಡಲು ಮುಂಬೈನಿಂದ ಕರೆಸಲಾಗಿದ್ದ ಯುವತಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಇಂದು ಹೈದ್ರಾಬಾದ್ನಲ್ಲಿ ಬಂಧಿಸಲಾಗಿದೆ.
ಅತ್ಯಾಚಾರಕ್ಕೊಳಗಾದ ಯುವತಿಯ ಎಟಿಎಂ ಕಸಿದು, ಹಣ ಡ್ರಾ ಮಾಡಿರುವುದು ಎಟಿಎಂನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 31 ನತ್ಯ ಪ್ರದರ್ಶನಕ್ಕಾಗಿ ನನ್ನನ್ನು ತಮ್ಮ ಹೈದ್ರಾಬಾದ್ಗೆ ಬರಮಾಡಿಕೊಂಡರು, ವಿಮಾನನಿಲ್ದಾಣಕ್ಕೆ ಬಂದ ಮೂವರು ನನ್ನನ್ನು ಒಂದು ಮನೆಗೆ ಕರೆದೊಯ್ದರು. ಡ್ರಗ್ ಮಿಶ್ರಣ ಮಾಡಿದ ಸಾಫ್ಟ್ ಡ್ರಿಂಕ್ ನೀಡಿದ್ದಾರೆ. ಪ್ರಜ್ಞೆ ಕಳೆದುಕೊಂಡಾಗ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿ ಇದ್ದ ಎಟಿಎಂ ಕಸಿದು ತನ್ನ ಖಾತೆಯಲ್ಲಿದ್ದ ಹಣ ದೋಚಿದ್ದಾರೆ ಎಂದು ಯುವತಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.