ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕುಮಾರ್ ವಿಶ್ವಾಸ್ ಗೆ ಕಪ್ಪು ಧ್ವಜ ಪ್ರದರ್ಶನ

ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಅವರ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿದ ಪ್ರತಿಭಟನಾಕಾರರು...

Mainashree
Updated On : 12 Jan 2014, 6:17 am

ಲಖನೌ: ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಅವರ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿದ ಪ್ರತಿಭಟನಾಕಾರರು ಭಾನುವಾರ ಕಪ್ಪು ಬಾವುಟ ಹಾರಿಸಿದ್ದಾರೆ.

ಇಂದು ಕುಮಾರ್ ವಿಶ್ವಾಸ್ ಅವರು ಜನವಿಸ್ವಾಸ್ ರ್ಯಾಲಿ ಕೈಗೊಳ್ಳಲು ಮುಂದಾಗಿದ್ದರು, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕಪ್ಪು ಧ್ವಜ ಹಾರಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆಯಷ್ಟೇ, ಲಖನೌದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಆಮ್ ಆದ್ಮಿ ಪಕ್ಷದ ನೇತಾರ ಕುಮಾರ್ ವಿಶ್ವಾಸ್ ಮೇಲೆ ಮೊಟ್ಟೆ ಎಸೆದಿದ್ದರು.

ವಿಶ್ವಾಸ್ ಅವರ ಕವನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಪ್ರತಿಭಟಿಸಿದ ಕೆಲವರು ಮೊಟ್ಟೆ ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೆ, ಇಂದು ಕುಮಾರ್ ವಿಶ್ವಾಸ್ ನೇತೃತ್ವದಲ್ಲಿ ನಡೆಯಬೇಕಿದ್ದ ಜನವಿಶ್ವಾಸ್ ರ್ಯಾಲಿಗೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕುಮಾರ್ ವಿರುದ್ಧ ಘೋಷಣೆ ಕೂಗುತ್ತಾ ಕಪ್ಪು ಧ್ವಜ ಹಾರಿಸಿದ್ದಾರೆ.

ತಾನು ರಾಜಕಾರಣಕ್ಕೆ ಬರುವ ಮುನ್ನವೇ ವಿವಿಧ ಕವಿ ಸಮ್ಮೇಳನಗಳಲ್ಲಿ ಆ ಕವನವನ್ನು ವಾಚಿಸಿದ್ದೆ. ನಾನು ಯಾರನ್ನೂ ಉದ್ದೇಶಪೂರ್ವಕವಾಗಿ ನೋಯಿಸಿಲ್ಲ. ಕವಿತೆಗೆ ಸಂಬಂಧಪಟ್ಟಂತೆ ನಾನು ಈ ಮೊದಲೇ ಕ್ಷಮೆಯಾಚಿಸಿದ್ದೇನೆ ಎಂದು ನಿನ್ನೆ ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement