ಕೈಗೆಟುಕುವ ಬೆಲೆಗೆ ವಿದ್ಯುತ್ ಪೂರೈಕೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ: ಪ್ರಧಾನಿ
ನವದೆಹಲಿ: ಕೈಗೆಟುಕುವ ಬೆಲೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವುದರಿಂದ ದೇಶದ ಆರ್ಥಿಕ ಬೆಳವಣೆಗೆ ಸಾಧ್ಯವಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಭಾನುವಾರ ಹೇಳಿದ್ದಾರೆ.
2014ರ ಪೆಟ್ರೋಟೆಕ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ವಿದ್ಯುತ್ಗೆ ಬೇಡಿಕೆ ಹೆಚ್ಚಾಗಿದ್ದು, ಅದನ್ನು ಸಮಪರ್ಕವಾಗಿ ನಿಭಾಯಿಸಬೇಕಿದೆ. ಇದಕ್ಕಾಗಿ ದೇಶದಲ್ಲಿ ಮುಂದಿನ 2 ದಶಕದಲ್ಲಿ 3 ರಿಂದ 4 ಪಟ್ಟು ಶಕ್ತಿ ಸರಬರಾಜುವನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.
ಹೆಚ್ಚಿದ ದರವನ್ನು ಹಿಂಪಡೆಯುವ ಸಲುವಾಗಿ ಅದರ ನೀತಿಯನ್ನು ಸಂರಚಿಸಲಾಗುತ್ತದೆ. ಅಲ್ಲದೆ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ಸಮರ್ಪಕಗೊಳಿಸುವ ಅಗತ್ಯವಿದೆ. ಇಂಧನ ಕ್ಷೇತ್ರ, ತೈಲ ಮತ್ತು ಅನಿಲ ಪರಿಶೋಧನೆಯ ಅಭಿವೃದ್ಧಿಗಾಗಿ ನಿರ್ದಿಷ್ಟ ಗಮನ ನೀಡಬೇಕಿದೆ ಎಂದು ಪ್ರಧಾನಿ ಸಿಂಗ್ ತಿಳಿಸಿದ್ದಾರೆ.