ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜೆಡಿಎಸ್‌ನಿಂದ ಮುಖ್ಯಮಂತ್ರಿ ಅವಕಾಶ ತಪ್ಪಿತು: ಸಿಎಂ

ಜೆಡಿಎಸ್‌ನಿಂದ ಎನಗೆ ಮುಖ್ಯಮಂತ್ರಿ ಅವಕಾಶ ತಪ್ಪಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ...

Mainashree
Updated On : 12 Jan 2014, 5:11 am

ಬೆಂಗಳೂರು: ಜೆಡಿಎಸ್‌ನಿಂದ ಎನಗೆ ಮುಖ್ಯಮಂತ್ರಿ ಅವಕಾಶ ತಪ್ಪಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.

ಜೆಡಿಎಸ್‌ನಲ್ಲಿ ಬೇರೆವರಿಗೆ ಸಿಎಂ ಆಗಲು ಅವಕಾಶವಿಲ್ಲ. ದೇವೇಗೌಡ ಇಲ್ಲವೇ ಅವರ ಮಕ್ಕಳು ಮುಖ್ಯಮಂತ್ರಿಗಳಾಗಬೇಕು. ಇದನ್ನಾ ಅವರು ಸದನದಲ್ಲೇ ಹೇಳಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

ಇಂದು ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಾನು ಅಹಿಂದ ಮಾರ್ಗವನ್ನು ಅನುಸರಿಸದವನು. ಕಾಂಗ್ರೆಸ್ ಕೂಡ ಅಹಿಂದ ಮಾದರಿ ಕೆಲಸ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ನಾನು ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಕಾಂಗ್ರೆಸ್ ನನ್ನನ್ನು ಮುಖ್ಯಮಂತ್ರಿ ಮಾಡಿದೆ ಎಂದು ಸಿಎಂ ತಿಳಿಸಿದ್ದಾರೆ.

ಖಾಸಗಿ ಕ್ಷೇತ್ಕಗಳಲ್ಲೂ ಒಬಿಸಿಗೆ ಮೀಸಲಾತಿ ಸಿಗಬೇಕು, ನಮ್ಮದು ಕೇವಲ ಅಹಿಂದ ಸರ್ಕಾರವಲ್ಲ, ಹಿಂದುಳಿದವರ ಹಿತಕಾಯುವ ಸರ್ಕಾರ ಎಂದಿದ್ದಾರೆ.

ಜಾತಿ ಸಮಾವೇಶಗಳನ್ನು ಕೆಲವರು ವಿರೋಧಿಸುತ್ತಾರೆ. ಯಡಿಯೂರಪ್ಪ. ಅನಂತ್, ಈಶ್ವರಪ್ಪ, ಶೆಟ್ಟರ್ ಸೇರಿದಂತೆ ಅನೇಕರು ಹಿಂದುಳಿದ ವರ್ಗಗಳ ವಿರೋಧಿಗಳು. ನನ್ನ ಪ್ರಕಾರ ಜಾತಿ ಸಮಾವೇಶದಿಂದ ಒಗ್ಗಟ್ಟು ಸಾಧ್ಯ, ಒಗ್ಗಟ್ಟಾದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಿಎಂ ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement