ಧರ್ಮ ಸಂಘಟನೆಯಿಂದ ಶಾಂತಿಗೆ ಧಕ್ಕೆ: ಸೊನಿಯಾ
ನವದೆಹಲಿ: ಧರ್ಮ ಸಂಘಟನೆಯಿಂದ ದೇಶದ ಶಾಂತಿಗೆ ಧಕ್ಕೆಯಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾನುವಾರ ಹೇಳಿದ್ದಾರೆ.
ದೇಶದ ಜನರು ಎಚ್ಚೆತ್ತುಕೊಂಡು ಧರ್ಮ ಸಂಘಟನೆ ವಿರುದ್ಧ ಹೋರಾಡಬೇಕು. ಇಲ್ಲಿ ಎಲ್ಲಾ ಧರ್ಮಗಳು ಒಂದೇ ಎಂದು ಪರಿಗಣಿಸಬೇಕು. ಇದರಿಂದ ಮಾತ್ರ ಒಗ್ಗಟ್ಟು ಸಾಧ್ಯ ಎಂದು ಅವರು ತಿಳಿಸಿದ್ದಾರೆ.
ಸಂಘಗಳನ್ನು ಬಿಟ್ಟು, ನಾವೆಲ್ಲರು ಒಂದೇ ಎನ್ನುವುದರ ಮೂಲಕ ಇಂದಿನ ಯುವ ಜನತೆಗೆ ಮಾದರಿಯಾಗಬೇಕು. ಪ್ರತಿಯೊಬ್ಬ ಯುವಕ ಯುವತಿಯರು ವಿದ್ಯಾವಂತರಾಗಬೇಕು. ವಿದ್ಯೆಯೇ ನಮ್ಮ ದೇಶದ ಆಸ್ತಿ. ಇದಕ್ಕೆ ಎಲ್ಲರೂ ಒಗ್ಗಟ್ಟಾಗಿ ಯುವಪೀಳಿಗೆಯನ್ನು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರ ಮಾತುಗಳು ಈಗಲೂ ಪ್ರಸ್ತುತ ಮತ್ತು ಮಹತ್ವವಾದವು. ಇದನ್ನು ಎಲ್ಲರೂ ತಮ್ಮ ದಿನನಿತ್ಯದ ಜೀವನಶೈಲಿಯಲ್ಲಿ ಅಳವಡಿಸಿಕೊಂಡರೆ ಏಳಿಗೆ ಖಂಡಿತ ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ.