ನಾಳೆ ಕೋಲ್ಲಾಪುರ ಬಂದ್ಗೆ ಕರೆ ನೀಡಿದ ಶಿವಸೇನಾ
ಮಹಾರಾಷ್ಟ್ರದ ಕೊಲ್ಲಾಪುರದ ಟೋಲ್ಗೇಟ್ ಬಳಿ ಸಂಗ್ರಹಿಸುತ್ತಿದ್ದ ತೆರಿಗೆ ಹಣ ವಸೂಲಿಗೆ ವಿರೋಧಿಸಿ ಭಾನುವಾರ...
ಕೋಲ್ಲಾಪುರ: ಮಹಾರಾಷ್ಟ್ರದ ಕೊಲ್ಲಾಪುರದ ಟೋಲ್ಗೇಟ್ ಬಳಿ ಸಂಗ್ರಹಿಸುತ್ತಿದ್ದ ತೆರಿಗೆ ಹಣ ವಸೂಲಿಗೆ ವಿರೋಧಿಸಿ ಭಾನುವಾರ ಶಿವಸೇನಾ ಪ್ರತಿಭಟನೆ ನಡೆಸಿದೆ.
ಎರಡು ಟೋಲ್ಗೇಟ್ಗಳಿಗೆ ಬೆಂಕಿ ಹಚ್ಚಿರುವ ಶಿವಸನೇನಾ ಕಾರ್ಯಕರ್ತರು, ಹಣ ಸಂಗ್ರಹಣೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಇಂದಿನಿಂದ ಶಿವಸೇನಾ ಟೋಲ್ ವಿರೋಧಿ ಆಂದೋಲನ ಕೈಗೊಂಡಿದ್ದು, ಟೋಲ್ ಗೇಟ್ ಬಳಿ ಹಣ ಸಂಗ್ರಹಿಸಿದಂತೆ ತಡೆ ಹಾಕಿದೆ.
ಕೊಲ್ಲಾಪುರದಲ್ಲಿರುವ ಟೋಲ್ಗೇಟ್ ಬಳಿ ಹಣ ಸಂಗ್ರಹಿಸುತ್ತಿದ್ದ ನಾಲ್ಕು ಕಚೇರಿಯನ್ನು ಶಿವಸೇನಾ ಧ್ವಂಸಗೊಳಿಸಿದ್ದು, ನಾಳೆ ಕೋಲ್ಲಾಪುರ್ ಬಂದ್ಗೆ ಕರೆ ನೀಡಿದೆ. ಇಂದಿನಿಂದಲೇ ಕೊಲ್ಲಾಪುರದ ಹೆದ್ದಾರಿಯಲ್ಲಿ ವಾಹನದ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ಪ್ರತಿಭಟನೆ ತೀವ್ರವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಅವರು, ಶಾಂತಿ ಕಾಪಾಡಲು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ.
ಗುತ್ತಿಗೆ ಆಧಾರದ ಮೇಲೆ ರಸ್ತೆ ಅಭಿವೃದ್ಧಿಗೊಳಿಸಿದ ಐಆರ್ಬಿ ಖಾಸಗಿ ಕಂಪನಿ 2013ರ ಅಕ್ಟೋಬರ್ ತಿಂಗಳಿನಿಂದ ಟೋಲ್ ಸಂಗ್ರಹಿಸುತ್ತಿದೆ. ಆದರೆ ತೆರಿಗೆ ಹಣ ಎಂಬ ಹೆಸರಲ್ಲಿ ಜನರ ಹಣ ಲೂಠಿ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.