ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ: 9 ಜನರ ದುರ್ಮರಣ
ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ ಪಲ್ಟಿ ಹೊಡೆದಿದ್ದು, ಐವರು ಮಹಿಳೆ ಸೇರಿದಂತೆ 9 ಜನರು ಸಾವನ್ನಪ್ಪಿರುವ ಘಟನೆ...
ಬಾಗಲಕೋಟೆ: ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ ಪಲ್ಟಿ ಹೊಡೆದಿದ್ದು, ಐವರು ಮಹಿಳೆ ಸೇರಿದಂತೆ 9 ಜನರು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ಬಾಗಲಕೋಟೆಯ ಜಮಖಂಡಿನ ತೊದಲಬಾಗಿಯಲ್ಲಿ 20 ಟನ್ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. 20ಕ್ಕೂ ಹೆಚ್ಚು ಜನರು ಕಬ್ಬಿನಡಿ ಸಿಲುಕಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ತೊದಲಬಾಗಿಯಲ್ಲಿ ಇಂದು ಸಂತೆ ನಡೆಯುತ್ತಿತ್ತು. ಸಂತೆಗೆ ಬಂದ ಜನರ ಮೇಲೆ ಟ್ರ್ಯಾಕ್ಟರ್ ಉರುಳಿದೆ ಎನ್ನಲಾಗುತ್ತಿದೆ. ಜಮಖಂಡಿಯಲ್ಲಿರುವ ರೇಣುಕಾ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ಸಾಗಿಸಲಾಗುತ್ತಿತ್ತು.
ಸಾವಳಗಿ ಠಾಣೆ ಪೊಲೀಸರು ಕಾರ್ಯಚರಣೆ ಕೈಗೊಂಡಿದ್ದು, 2 ಜೆಸಿಬಿಗಳಿಂದ ರಕ್ಷಣಾ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.