ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನ್ಯಾ. ಸ್ವತಂತ್ರಕುಮಾರ್ ಲೈಂಗಿಕ ಕಿರುಕುಳ ಪ್ರಕರಣ: 15ಕ್ಕೆ ಸುಪ್ರೀಂನಲ್ಲಿ ವಿಚಾರಣೆ

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸ್ವತಂತ್ರಕುಮಾರ್ ವಿರುದ್ಧ ತನಿಖೆ..

Lingaraj Badiger
Updated On : 13 Jan 2014, 12:03 pm

ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸ್ವತಂತ್ರಕುಮಾರ್ ವಿರುದ್ಧ ತನಿಖೆ ನಡೆಸಬೇಕು ಎಂದು ಕೋರಿ ಸ್ವತಃ ಲೈಂಗಿಕ ಕಿರುಕುಳಕ್ಕೆ ಈಡಾದ ಯುವತಿ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದು, ಜ.15ಕ್ಕೆ ದೂರಿನ ವಿಚಾರಣೆ ನಡೆಯಲಿದೆ.

ದೂರು ಸ್ವೀಕರಿಸಿದ ಸಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಅವರು, ಬುಧವಾರ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.

ಸುಪ್ರೀಂನ ನಿವೃತ್ತ ನ್ಯಾಯಮೂರ್ತಿ ಹಾಗೂ ಈಗಿನ ಹಸಿರು ಪೀಠದ ನ್ಯಾಯಮೂರ್ತಿ ಸ್ವತಂತ್ರಕುಮಾರ್ ಅವರು ಇಂಟರ್ನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದೂರು ದಾಖಲಾಗಿದೆ.

2011ರ ಮೇ ನಲ್ಲಿ ನ್ಯಾ. ಸ್ವತಂತ್ರಕುಮಾರ್ ಅವರು ತಮ್ಮ ಕಚೇರಿಯಲ್ಲಿ ಇಂಟರ್ನಿಶಿಪ್ ಮಾಡುವಾಗ ಈ ಘಟನೆ ನಡೆದಿತ್ತು. ಮಧ್ಯದಲ್ಲೇ ಪ್ರಾಯೋಗಿಕ ಅವಧಿ ಮುಗಿಸಿ ಹೋಗಿದ್ದೆ. ನ್ಯಾ. ಗಂಗೂಲಿ ಪ್ರಕರಣ ನಂತರ, ಸಿ.ಜೆ.ಪಿ. ಸದಾಶಿವಂಗೆ ದೂರು ನೀಡಿದ್ದೇನೆ ಎಂದು ಯುವತಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement