ಪಾಕ್‌ನಿಂದ ನಿಯಮ ಉಲ್ಲಂಘನೆಯಾದರೆ ಭಾರತ ಸುಮ್ಮನಿರುವುದಿಲ್ಲ
ಗಡಿ ಭಾಗದಲ್ಲಿ ಪಾಕಿಸ್ತಾನದ ಸೈನಿಕರು ಅಕ್ರಮವಾಗಿ ನುಸುಳುತ್ತಿರುವುದರ ಬಗ್ಗೆ ವಿಷಾಧ ವ್ಯಕ್ತಪಡಿಸಿರುವ ಸೇನಾ...
ನವದೆಹಲಿ: ಗಡಿ ಭಾಗದಲ್ಲಿ ಪಾಕಿಸ್ತಾನದ ಸೈನಿಕರು ಅಕ್ರಮವಾಗಿ ನುಸುಳುತ್ತಿರುವುದರ ಬಗ್ಗೆ ವಿಷಾಧ ವ್ಯಕ್ತಪಡಿಸಿರುವ ಸೇನಾ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್, ಪಾಕ್‌ನಿಂದ ನಿಯಮ ಉಲ್ಲಂಘನೆಯಾದರೆ ಭಾರತ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಗಡಿ ಭಾಗದಲ್ಲಿ ಆಕ್ರಮಿಸುತ್ತಿದೆ. ಇದೇ ರೀತಿಯ ವರ್ತನೆಯನ್ನು ಪಾಕ್ ಮುಂದುವರೆಸಿದರೇ, ಭಾರತ ತಕ್ಕ ತಿರುಗೇಟು ನೀಡಲಿದೆ ಎಂದು ಬಿಕ್ರಂ ಸಿಂಗ್ ಸೋಮವಾರ ಹೇಳಿದ್ದಾರೆ.
ಪಾಕ್ ಭಾರತದ ಜೊತೆ ಹೇಗೆ ವರ್ತಿಸುತ್ತಿದೆಯೋ ಅದೇ ಮಾದರಿಯಲ್ಲಿ ಭಾರತ, ಪಾಕ್‌ಗೆ ತಿರಗೇಟು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.
ನೆರೆ ದೇಶಗಳು ನಿಯಮಗಳನ್ನು ಪಾಲಿಸಿದರೆ ನಾವು ಪಾಲಿಸುತ್ತೇವೆ. ಅವರು ನಿಯಮ ಮುರಿದರೇ ನಾವು ನಿಯಮಗಳನ್ನು ಮುರಿಯುತ್ತೇವೆ ಎಂದು ಬಿಕ್ರಂ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಸೇನಾ ಪಡೆ ಕದನ ವಿರಾಮದ ನಿಯಮ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿತ್ತು. ಇದನ್ನು ತಳ್ಳಿ ಹಾಕಿರುವ ಬಿಕ್ರಂ ಸಿಂಗ್, ಭಾರತದ ಸೇನಾಪಡೆಯ ಮೇಲೆ ಸುಳ್ಳು ಆರೋಪ ಮಾಡಿದರೆ ಸಹಿಸಿಕೊಳ್ಳುವುದಿಲ್ಲ. ನಮ್ಮ ಸೈನಿಕರು ಎಂದಿಗೂ ನಿಯಮವನ್ನು ಮುರಿವುದಿಲ್ಲ. ನಿಯಮ ಉಲ್ಲಂಘನೆ ಮಾಡುವುದು ಪಾಕ್ ಸೈನಿಕರದ್ದಾಗಿದೆ ಎಂದು ದೂರಿದ್ದಾರೆ.