ಭವಿಷ್ಯ ನಿಧಿ ಬಡ್ಡಿ ದರ ಶೇ.8.75ಕ್ಕೆ ಏರಿಕೆ
ನೌಕರರ ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿ ದರವನ್ನು 2013-14ನೇ ಸಾಲಿಗೆ ಶೇ.8.75 ರಷ್ಟು ನೀಡಲು ನೌಕರರ ಭವಿಷ್ಯ ನಿಧಿ ...
ನವದೆಹಲಿ: ನೌಕರರ ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿ ದರವನ್ನು 2013-14ನೇ ಸಾಲಿಗೆ ಶೇ.8.75 ರಷ್ಟು ನೀಡಲು ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ 20.740ಕೋಟಿ ಭವಿಷ್ಯ ನಿಧಿಯನ್ನು ನೌಕರರಿಗೆ ನೀಡಲಾಗುತಿತ್ತು. ಈ ಬಾರಿ ಬಡ್ಡಿ ದರ ಏರಿಕೆ ಮಾಡಲು ನಿರ್ಧರಿಸುವುದರಿಂದ ಈ ಸಾಲಿನಲ್ಲಿ ನೌಕರರಿಗಾಗಿ 20.796.96 ಕೋಟಿಯಷ್ಟು ಹಣವನ್ನು ವ್ಯಯಿಸಬೇಕಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
2011-12ನೇ ಸಾಲಿನಲ್ಲಿ ಶೇ. 8.25 ಬಡ್ಡಿ ದರ ನೀಡಲಾಗಿತ್ತು. ಇನ್ನೂ ಕಳೆದ ವರ್ಷ ಅಂದರೆ 2012-13ನೇ ಸಾಲಿಗೆ 8.5 ಬಡ್ಡಿ ದರ ನಿಗದಿ ಪಡಿಸಿತ್ತು.
ಪ್ರಸ್ತುತ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಬಡ್ಡಿ ದರ ಏರಿಕೆ ಮಾಡಲಾಗಿದೆ. ಶೇ.8.75ರಿಂದ ಶೇ 9ರಷ್ಟು ಏರಿಕೆ ಮಾಡಬೇಕಾದರೆ ಸಂಸ್ಥೆಗೆ 1, 220 ಕೋಟಿ ಹಣ ಬೇಕಾಗುವುದರಿಂದ ನಿರ್ಧಾರವನ್ನು ಕೈಬಿಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.