ವಾಟರ್ ಮಾಫಿಯಾದಿಂದ ಕೇಜ್ರಿವಾಲ್ಗೆ ಜೀವ ಬೆದರಿಕೆ
ದೆಹಲಿ ನಾಗರಿಕರಿಗೆ ಪ್ರತಿ ದಿನ 700 ಲೀಟರ್ ನೀರನ್ನು ಉಚಿತವಾಗಿ ನೀಡುವ ಭರವಸೆಯನ್ನು ಈಡೇರಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್...
ನವದೆಹಲಿ: ದೆಹಲಿ ನಾಗರಿಕರಿಗೆ ಪ್ರತಿ ದಿನ 700 ಲೀಟರ್ ನೀರನ್ನು ಉಚಿತವಾಗಿ ನೀಡುವ ಭರವಸೆಯನ್ನು ಈಡೇರಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ವಾಟರ್ ಮಾಫಿಯಾ ಮತ್ತು ಟೆಂಡರ್ ಮಾಫಿಯಾಗಳಿಂದ ಜೀವ ಬೆದರಿಕೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಸೋಮವಾರ ಮಾಹಿತಿಯನ್ನು ಹೊರ ಹಾಕಿದೆ.
ಕೇಜ್ರಿವಾಲ್ಗೆ ಮಾಫಿಯಾಗಳಿಂದ ಜೀವ ಬೆದರಿಕೆ ಇದೆ ಎಂಬ ಮಾಹಿತಿ ಕೇಂದ್ರ ಗುಪ್ತಚರ ಇಲಾಖೆಗೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗೆ ಬೀಗಿ ಭದ್ರತೆ ಒದಗಿಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಝಡ್ ಮಾದರಿ ಭದ್ರತೆಯನ್ನು ಕೇಜ್ರಿವಾಲ್ ನಿರಾಕಿಸಿದ್ದರು. ಇದರ ನಡುವೆಯೂ ಮುಖ್ಯಮಂತ್ರಿಗಳಿಗೆ ಭದ್ರತೆ ನೀಡಲು ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ನಿರ್ಧರಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರಿಗೆ 30 ಮಂದಿ ಭದ್ರತಾ ಸಿಬ್ಬಂದಿಗಳು ದಿನದ 24 ಗಂಟೆಗಳು ಬೀಗಿ ಭದ್ರತೆಯನ್ನು ನೀಡುತ್ತಾರೆ. ಅಲ್ಲದೆ ಪ್ರತಿ ನಿತ್ಯ ಮುಖ್ಯಮಂತ್ರಿಗಳ ಜೊತೆಗೆ ಎರಡು ಭದ್ರತಾ ವಾಹನಗಳು ಸಂಚರಿಸುತ್ತವೆ.
ಪ್ರಸ್ತುತ ಕೇಜ್ರಿವಾಲ್ ಘಾಜಿಯಾಬಾದ್ನ ಕೌಶಾಂಬಿ ಪ್ರದೇಶದಲ್ಲಿರುವ ಗಿರ್ನಾರ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದಾರೆ. ಈ ಮನೆಯ ಸುತ್ತಲು ಇಬ್ಬರು ಮುಖ್ಯಪೇದೆಗಳು ಸೇರಿದಂತೆ 8 ಜನ ಪೇದೆಗಳ ತಂಡ ಭದ್ರತೆ ನಿರ್ವಹಿಸಲಿದ್ದಾರೆ.