ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಆಪರೇಷನ್ ಬ್ಲೂಸ್ಟಾರ್‌ಗೆ ಬ್ರಿಟನ್ ನೆರವು?

ಆಪರೇಷನ್ ಬ್ಲೂಸ್ಟಾರ್ ಸಮಯದಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾ ಹಾಗೂ ಬ್ರಿಟನ್ ಪ್ರಧಾನಿ ದಿ. ಮಾರ್ಗರೇಟ್ ಥ್ಯಾಚರ್ ಕೈಜೋಡಿಸಿದ್ದರೇ?

Lingaraj Badiger
Updated On : 14 Jan 2014, 6:49 am

ಅಮೃತಸರ: ಆಪರೇಷನ್ ಬ್ಲೂಸ್ಟಾರ್ ಸಮಯದಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾ ಹಾಗೂ ಬ್ರಿಟನ್ ಪ್ರಧಾನಿ ದಿ. ಮಾರ್ಗರೇಟ್ ಥ್ಯಾಚರ್ ಕೈಜೋಡಿಸಿದ್ದರೇ?

1984ರಲ್ಲಿ ಅಮೃತಸರದ ಸ್ವರ್ಣಮಂದಿರ ಉಗ್ರರ ಹಿಡಿತದಲ್ಲಿದ್ದಾಗ ನಡೆದ ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆ ವೇಳೆ ಭಾರತಕ್ಕೆ ಬ್ರಿಟನ್ ಸರ್ಕಾರವೂ ನೆರವು ನೀಡಿತ್ತು ಎಂಬ ಅಂಶ ಈಗ ಬಹಿರಂಗವಾಗಿದೆ.

ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರಿಗೆ ನೆರವಿನ ಹಸ್ತ ಚಾಚಿದ್ದ ಬ್ರಿಟನ್ ಪ್ರಧಾನಿ ದಿ. ಮಾರ್ಗರೇಟ್ ಥ್ಯಾಚರ್ ಅವರು ಕಾರ್ಯಾಚರಣೆಗೆ ಬ್ರಿಟನ್‌ನ ವಿಶೇಷ ವಾಯುಪಡೆ(ಎಸ್‌ಎಎಸ್) ಅಧಿಕಾರಿಗಳನ್ನು ಕಳುಹಿಸಿದ್ದರು.

ಸ್ವರ್ಣಮಂದಿರದೊಳಕ್ಕೆ ಭಾರತದ ಭದ್ರತಾ ಪಡೆಗಳು ನುಗ್ಗಿದಾಗ ಅವರ ಜತೆ ಎಸ್‌ಎಎಸ್ ಅಧಿಕಾರಿಗಳೂ ಇದ್ದರು ಎಂದು ಬ್ರಿಟನ್‌ನ ಲೇಬರ್ ಪಕ್ಷದ ಸಚಿವರೊಬ್ಬರು ತಿಳಿಸಿದ್ದಾಗಿ 'ಸ್ಟಾಪ್ ಡಿಪೋರ್ಟೇಷನ್‌' ವೆಬ್‌ಸೈಟ್ ವರದಿ ಮಾಡಿದೆ. ಲಂಡನ್‌ನ ನ್ಯಾಷನಲ್ ಆರ್ಕೈವ್ ಇದಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಿದೆ.

ಸಿಖ್ಖರಿಂದ ತೀವ್ರ ವಿರೋಧ: ಈ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ದೇಶದ ಸಿಖ್ಖರು ಕೆಂಡಾಮಂಡಲರಾಗಿದ್ದಾರೆ. ತನ್ನದೇ ನೆಲದ ಜನರ ಮೇಲೆ ದಾಳಿ ಮಾಡಲು ವಿದೇಶದ ನೆರವು ಪಡೆದ ಭಾರತ ಸರ್ಕಾರದ ಕ್ರಮವನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ ಅಧ್ಯಕ್ಷ ಅವತಾರ್ ಸಿಂಗ್ ಖಂಡಿಸಿದ್ದಾರೆ. ಜತೆಗೆ, ಈ ಬಗ್ಗೆ ತಕ್ಷಣವೇ ತನಿಖೆನಡೆಯಬೇಕೆಂದು ಸಿಖ್ ಹಕ್ಕುಗಳ ಹೋರಾಟಗಾರ ತರ್ಲೋಚನ್ ಸಿಂಗ್ ಆಗ್ರಹಿಸಿದ್ದಾರೆ. ಇತರೆ ಸಿಖ್ ಸಂಘಟನೆಗಳೂ ತನಿಖೆಗೆ ಒತ್ತಾಯಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement