ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೇಧಾ ಪಾಟ್ಕರ್‌ಗೆ 'ಬಸವ ಕೃಷಿ' ಪ್ರಶಸ್ತಿ ಪ್ರದಾನ

ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ 2014ನೇ ಸಾಲಿನ 'ಬಸವ ಕೃಷಿ' ಪ್ರಶಸ್ತಿಯನ್ನು ಸಾಮಾಜಿಕ ಹೋರಾಟಗಾರ್ತಿ..

Lingaraj Badiger
Updated On : 14 Jan 2014, 2:32 am

ಬಾಗಕೋಟೆ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ 2014ನೇ ಸಾಲಿನ 'ಬಸವ ಕೃಷಿ' ಪ್ರಶಸ್ತಿಯನ್ನು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರಿಗೆ ಮಂಗಳವಾರ ಪ್ರದಾನ ಮಾಡಲಾಯಿತು.

ಇಂದು ಕೂಡಲಸಂಗಮದಲ್ಲಿ ನಡೆದ 5ನೇ ಕೃಷಿ ಸಂಕ್ರಾಂತಿ ಸಮಾರಂಭದಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮೇಧಾ ಪಾಟ್ಕರ್‌ಗೆ ಪ್ರಶಸ್ತಿ ಪ್ರದಾನ ಮಾಡಿದರು.

ಈ ಪ್ರಶಸ್ತಿ 50 ಸಾವಿರ ನಗದು, ತಾಮ್ರ ಪತ್ರ ಹಾಗೂ ಸ್ಮರಣಿಕೆಯನ್ನು ಹೊಂದಿದೆ.

ಕೃಷಿ ಹಾಗೂ ಕೃಷಿಕರನ್ನು ರಕ್ಷಿಸುವ ಮತ್ತು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ 2012ರ ಮಕರ ಸಂಕ್ರಾಂತಿಯಂದು ರಾಷ್ಟ್ರ ಮಟ್ಟದ 'ಬಸವ ಕೃಷಿ ಪ್ರಶಸ್ತಿ' ಸ್ಥಾಪಿಸಲಾಯಿತು. ಆ ವರ್ಷ ರಾಜಸ್ಥಾನದ ರಾಜೇಂದ್ರಸಿಂಗ್, 2013ರಲ್ಲಿ ಅಣ್ಣಾ ಅಜಾರೆ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement