ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸೋಮನಾಥ್ ಭಾರ್ತಿಯನ್ನು ಸಮರ್ಥಿಸಿಕೊಂಡ ಕೇಜ್ರಿವಾಲ್

ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಸಾಕ್ಷಿ ಮೇಲೆ ಪ್ರಭಾವ ಬೀರಿರುವ ಆರೋಪ ಎದುರಿಸುತ್ತಿರುವ ದೆಹಲಿ ಕಾನೂನು ಸಚಿವ...

Vishwanath S
Updated On : 14 Jan 2014, 8:04 am

ನವದೆಹಲಿ: ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಸಾಕ್ಷಿ ಮೇಲೆ ಪ್ರಭಾವ ಬೀರಿರುವ ಆರೋಪ ಎದುರಿಸುತ್ತಿರುವ ದೆಹಲಿ ಕಾನೂನು ಸಚಿವ ಸೋಮನಾಥ್ ಭಾರ್ತಿಯವರನ್ನು ಸಮರ್ಥಿಸಿಕೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ತಮ್ಮ ಸಹೋದ್ಯೋಗಿ ಯಾವುದೇ ಸಾಕ್ಷ್ಯವನ್ನು ತಿರುಚುವ ಪ್ರಯತ್ನ ಮಾಡಿಲ್ಲ ಎಂದಿದ್ದಾರೆ.

ವಕೀಲರಾಗಿರುವ ಸೋಮನಾಥ್ ಭಾರ್ತಿ ಅವರ ಕಕ್ಷಿದಾರ ಪವನ್ ಕುಮಾರ್ ವಿರುದ್ಧ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಸಾಕ್ಷಿದಾರರೊಬ್ಬರಿಗೆ ಫೋನ್ ಕರೆ ಮಾಡಿ ಪ್ರಭಾವ ಬೀರಿರುವ ಆರೋಪವನ್ನು ಸಿಬಿಐ ಹೊರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಧೀಶರು ಸಾಕ್ಷಿಯನ್ನು ತಿದ್ದಿದ ಪರಿಣಾಮ ತೊಂದರೆಗೆ ಒಳಗಾದ ಕಿರಿಯ ಅಧಿಕಾರಿಯೊಬ್ಬರನ್ನು ರಕ್ಷಿಸುವುದಕ್ಕಾಗಿ ಸೋಮನಾಥ್ ಭಾರ್ತಿ ಅವರು ಕುಟುಕು ಕಾರ್ಯಾಚರಣೆ ನಡೆಸಿದ್ದರು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಕುಟುಕು ಕಾರ್ಯಚರಣೆಯಲ್ಲಿ ನಡೆದ ಸಂಭಾಷಣೆಯ ತುಣುಕುಗಳನ್ನು ನೀಡಲು ಸಿದ್ಧರಿದ್ದೇವೆ. ಅದನ್ನು ಪರೀಕ್ಷಿಸಿ ಅದರಲ್ಲಿ ಯಾವ ಅಕ್ರಮ ಎಸಗಲಾಗಿದೆ ಎಂಬುದನ್ನು ತಿಳಿಸಿ. ಈಗಾಗಲೇ ಮುದ್ರಿತ ಸಂಭಾಷಣೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಎಂದು ಭಾರ್ತಿ ಅವರಿಗೆ ತಿಳಿಸಲಾಗಿದೆ ಎಂದರು.

ಇದೊಂದು ಬ್ಯಾಂಕ್‌ವೊಂದರಲ್ಲಿ ನಡೆದ 100 ಕೋಟಿ ರುಪಾಯಿಯ ಭ್ರಷ್ಟಾಚಾರ ಪ್ರಕರಣ ಇದಾಗಿದೆ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement