ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಇನ್ನು ಮುಂದೆ ಭಾರತದ ಕಥೆಗಳು ಸ್ಫೂರ್ತಿ ನೀಡುವುದಿಲ್ಲ: ಮೋದಿ

21ನೇ ಶತಮಾನ ಅಂತ್ಯವಾಗುತ್ತಿದ್ದಂತೆ ಭಾರತದ ಕಥೆಗಳು ಪ್ರಭಾವ ಕಳೆದುಕೊಳ್ಳುವ ಸಾಧ್ಯತೆ...

Mainashree
Updated On : 15 Jan 2014, 1:56 am

ಗಾಂಧಿನಗರ: 21ನೇ ಶತಮಾನ ಅಂತ್ಯವಾಗುತ್ತಿದ್ದಂತೆ ಭಾರತದ ಕಥೆಗಳು ಪ್ರಭಾವ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

ದೇಶದಲ್ಲಿರುವ ಜನತೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಜನರಲ್ಲಿ ವಿಶ್ವಾಸ ಮೂಡಿಸುವ ಅಗತ್ಯವಿದೆ. ಇಲ್ಲವಾದರೆ ದೇಶದ ಅನೇಕ ಕಥೆಗಳು ನಶಿಸಿ ಹೋಗುತ್ತವೆ. ದೇಶದ ಸಂಸ್ಕೃತಿ ಸಾರುತ್ತಿದ್ದ ಅನೇಕ ಕಥೆಗಳು ಸ್ಫೂರ್ತಿ ನೀಡುವಂತದ್ದು, ಆದರೆ ಪ್ರಸ್ತುತ ಸ್ಥಿತಿ ಗಮನಿಸಿದರೆ, ಇನ್ನು ಮುಂದೆ ಭಾರತದ ಕಥೆಗಳು ತನ್ನ ಪ್ರಭಾವವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ಮುಂದಿನ ಪೀಳಿಗೆ ಕೇಳುವಂತಹ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವಾಗುವಂತಹ ಸ್ಥಿತಿ ಎದುರಾಗಿದೆ. ಅದಕ್ಕಾಗಿ ಎಲ್ಲರೂ ಒಂದಾಗಿ ಮುಂಬರುವಂತಹ ಸಮಸ್ಯೆಯನ್ನು ಈಗಲೇ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಮೋದಿ ತಿಳಿಸಿದ್ದಾರೆ.

ಭ್ರಷ್ಟಾಚಾರದ ಸರ್ಕಾರದಿಂದ ಜನರು ಹತಾಶೆಗೊಳಗಾಗಿದ್ದಾರೆ. ಅದರಿಂದ ಜನರನ್ನು ಹೊರ ತರಬೇಕು. ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು, ಮತ್ತೇ ಜನತೆಯಲ್ಲಿ ಭರವಸೆಯ ಬೀಜ ಬಿತ್ತಬೇಕು ಎಂದು ಮೋದಿ ಹೇಳಿದ್ದಾರೆ.

ಪಾಟ್ನಾದಲ್ಲಿ ಸರಣಿ ಬಾಂಬ್ ಸ್ಫೋಟಗೊಂಡಾಗ ರ್ಯಾಲಿಯಲ್ಲಿ ಭಾಗವಹಿಸಿದ್ದ ಮೋದಿ ಓಡಿ ಹೋಗಲಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಓಡಿ ಹೋಗಲು ನಾನು ಬಂದಿರಲಿಲ್ಲ. ಒಂದು ವೇಳೆ ಸ್ಫೋಟಕ್ಕೆ ಹೆದರಿ ಓಡಿ ಹೋಗುವುದಾದರೆ ನಾನು ಜನ್ಮ ತಾಳುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ದೇಶ ಅಭಿವೃದ್ಧಿ ಹೊಂದಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳುತ್ತಾರೆ. ಆದರೆ ಬಡವರಿಗೆ ಉಚಿತ ಶಿಕ್ಷಣ ನೀಡದೆ, ಅವನಿಗೆ ಆರ್ಥಿಕ ಸಹಾಯ ಮಾಡದೇ ಅಭಿವೃದ್ಧಿ ಹೊಂದಲು ಹೇಗೆ ಸಾಧ್ಯ. ಪ್ರತಿ ಬಡವ ಶಿಕ್ಷಣ ಪಡೆದು ಮುಂದೆ ಬಂದರೆ ಆಗಲೇ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮೋದಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement