ಎಎಸ್ಐ ಉದ್ದಂಡಪ್ಪ ಆರೋಗ್ಯ ವಿಚಾರಿಸಿದ ಖರ್ಗೆ
ಹೈದರಾಬಾದ್: ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಪಾತಕಿ ಮುನ್ನಾ ಬಂಧನಕ್ಕೆ ತೆರಳಿದ್ದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗುಲ್ಬರ್ಗಾದ ಸ್ಟೇಷನ್ ಬಜಾರ್ ಠಾಣೆಯ ಎಎಸ್ಐ ಉದ್ದಂಡಪ್ಪ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಇಂದು ಬೆಳಗ್ಗೆ ಹೈದರಾಬಾದ್ನಲ್ಲಿರುವ ಗ್ಲೋಬಲ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಉದ್ದಂಡಪ್ಪ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ರೋಜಾ ಠಾಣೆಯಲ್ಲಿ ಎಎಸ್ಐ ಆಗಿರುವ ಉದ್ದಂಡಪ್ಪ ಅವರಿಗೆ ತಗುಲಿದ್ದ ಗುಂಡು ಅವರ ಹೊಟ್ಟೆ ಛೇದಿಸಿ ಹೊಕ್ಕು ಸಣ್ಣ ಕರಳಿಗೆ ತೀವ್ರ ಗಾಯ ಮಾಡಿತ್ತು. ಇವರನ್ನು ಜನವರಿ 8ರಂದು ಹೈದ್ರಾಬಾದ್ಗೆ ಸ್ಥಳಾಂತರಿಸಲಾಗಿತ್ತು.