ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೇಜ್ರಿವಾಲ್ ವಿರುದ್ಧವೇ ಬಿನ್ನಿ ವಾಗ್ದಾಳಿ

ಕಾನೂನು ಸಚಿವ ಸೋಮ್‌ನಾಥ್ ಭಾರ್ತಿ ಅವರ ಪ್ರಕರಣದಿಂದ ತೀವ್ರ ಮುಜುಗರಕ್ಕೆ ಸಿಲುಕಿದ್ದ ದೇಹಲಿ ಮುಖ್ಯಮಂತ್ರಿ ಅರವಿಂದ್ ..

Lingaraj Badiger
Updated On : 15 Jan 2014, 8:12 am

ನವದೆಹಲಿ: ಕಾನೂನು ಸಚಿವ ಸೋಮ್‌ನಾಥ್ ಭಾರ್ತಿ ಅವರ ಪ್ರಕರಣದಿಂದ ತೀವ್ರ ಮುಜುಗರಕ್ಕೆ ಸಿಲುಕಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಈಗ ಮತ್ತೊಂದು ಇರುಸುಮುರುಸಿನ ಪ್ರಸಂಗ ಎದುರಾಗಿದೆ.

ಆಮ್ ಆದ್ಮಿ ಪಕ್ಷ(ಎಎಪಿ)ದ ಶಾಸಕ ವಿನೋದ್ ಕುಮಾರ್ ಬಿನ್ನಿ ಅವರು ಬುಧವಾರ ಕೇಜ್ರಿವಾಲ್ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

ಕೇಜ್ರಿವಾಲ್ ಬರಿ ಸುಳ್ಳುಗಾರ ಎಂದಿರುವ ಬಿನ್ನಿ, ಅಧಿಕಾರ ಬಂದನಂತರ ಬೇರೆ ಪಕ್ಷದವರಂತೆ ಕೇಜ್ರಿವಾಲ್ ಸಹ ಬದಲಾಗಿದ್ದಾರೆ. ಈಗ ಅವರನ್ನು ಭೇಟಿ ಮಾಡುವುದು ಕಷ್ಟ ಎಂದು ಹೇಳಿದ್ದಾರೆ. ಅಲ್ಲದೆ ಕಾಂಗ್ರೆಸ್ ವಿಚಾರದಲ್ಲೂ ದೆಹಲಿ ಸಿಎಂ ಮೃದುಧೋರಣೆ ತಾಳಿದ್ದಾರೆ ಎಂದು ಆರೋಪಿಸಿದ್ದಾರೆ.

ಜನರ ಭಾವನೆಗಳೊಂದಿಗೆ ಎಎಪಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿರುವ ಬಿನ್ನಿ, ತಾವು ಎಎಪಿ ತೊರೆದು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಿದ ಆರೋಪ ಎದುರಿಸುತ್ತಿರುವ ದೆಹಲಿ ಕಾನೂನು ಸಚಿವ ಸೋಮ್‌ನಾಥ್ ಭಾರ್ತಿ ಅವರು ರಾಜಿನಾಮೆ ನೀಡಬೇಕು ಎಂದು ಬಿನ್ನಿ ಒತ್ತಾಯಿಸಿದ್ದಾರೆ.

ಇನ್ನು ವಿನೋದ್ ಬಿನ್ನಿ ಟೀಕೆಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement