ದೆಹಲಿಯಲ್ಲಿ ವಿದೇಶಿ ಮಹಿಳೆ ಮೇಲೆ ಗ್ಯಾಂಗ್ರೇಪ್
ನವದೆಹಲಿ ರೇಲ್ವೇ ನಿಲ್ದಾಣದ ಬಳಿ ಮಂಗಳವಾರ ರಾತ್ರಿ 51 ಹರೆಯದ ವಿದೇಶಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ...
ನವದೆಹಲಿ: ನವದೆಹಲಿ ರೇಲ್ವೇ ನಿಲ್ದಾಣದ ಬಳಿ ಮಂಗಳವಾರ ರಾತ್ರಿ 51 ಹರೆಯದ ವಿದೇಶಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಡೆರ್ನಾರ್ಕ್ ಮೂಲದ ಈ ಮಹಿಳೆ ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಭೇಟಿ ನೀಡಿದ್ದು, ಮಂಗಳವಾರ ಮ್ಯೂಸಿಯಂಗೆ ಹೋಗಿದ್ದರು. ಅಲ್ಲಿಂದ ಅವರು ತಂಗಿದ್ದ ಪಹಾರ್ಗಂಜ್ ಹೋಟೆಲ್ಗೆ ಮರಳುವ ವೇಳೆ ದಾರಿ ತಪ್ಪಿದೆ. ಈ ಹೊತ್ತಲ್ಲಿ ಕೆಲವು ಯುವಕರು ಸೇರಿ ಅವರ ವಸ್ತುಗಳನ್ನು ದೋಚಿ ನಂತರ ಸಾಮೂಹಿಕ ಅತ್ಯಾಚಾರಗೈದಿದ್ದಾರೆ.
ನಂತರ ಹೋಟೆಲ್ಗೆ ಮರಳಿದ ಈ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪ್ರಸ್ತುತ ಘಟನೆ ಬಗ್ಗೆ ತನಿಖೆ ಮುಂದುವರಿದಿದೆ.
ದೆಹಲಿ ಪೊಲೀಸರು ಶಂಕೆಯ ಮೇರೆಗೆ ಪಹಾರ್ಗಂಜ್ ಪ್ರದೇಶದಲ್ಲಿ ರಾತ್ರಿ ಹೊತ್ತು ಅಡ್ಡಾಡುತ್ತಿದ್ದ ಕೆಲವು ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಮಹಿಳೆ ಬುಧವಾರ ಬೆಳಗ್ಗೆ ಸ್ವದೇಶಕ್ಕೆ ಮರಳಿರುವುದಾಗಿ ಬಲ್ಲಮೂಲಗಳು ಹೇಳಿವೆ.