ನಾಳೆ ಸಂಜೆ 6ರವರೆಗೆ ಗುಲ್ಬರ್ಗಾ ಬಂದ್
ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ನಿಧನ ಹಿನ್ನಲೆಯಲ್ಲಿ ಗುಲ್ಬರ್ಗಾ ಬಂದ್ ಘೋಷಿಸಲಾಗಿದೆ...
ಗುಲ್ಬರ್ಗಾ: ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ನಿಧನ ಹಿನ್ನಲೆಯಲ್ಲಿ ಗುಲ್ಬರ್ಗಾ ಬಂದ್ ಘೋಷಿಸಲಾಗಿದೆ.
ಮಲ್ಲಿಕಾರ್ಜುನ ಬಂಡೆ ಅವರ ನಿಧನಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಗುಲ್ಬರ್ಗಾದ ಜನತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ತೀವ್ರವಾದ ಹಿನ್ನಲೆಯಲ್ಲಿ ಪೊಲೀಸರು ನಾಳೆ ಸಂಜೆ 6ರವರೆಗೆ ಗುಲ್ಬರ್ಗಾ ನಿಷೇದಾಜ್ಞೆ ಜಾರಿ ಮಾಡಿದ್ದಾರೆ ಎಂದು ತಿಳಿಬಂದಿದೆ.
ಗುಲ್ಬರ್ಗಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸೆಕ್ಷನ್ 144 ಜಾರಿ ಮಾಡಲಾಗಿದೆ.
ಸರ್ಕಾರದ ನಿರ್ಲಕ್ಷವೇ ಬಂಡೆ ಅವರ ಸಾವಿಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗುಲ್ಬರ್ಗಾದಲ್ಲಿ ಪೊಲೀಸರಿಂದ ಲಘು ಲಾಠಿ ಪ್ರಹಾರವಾಗಿದೆ. ಜೇವರ್ಗಿ ಪಟ್ಟಣದಲ್ಲಿ ಸ್ವಯಂ ಘೋಷಿತ ಬಂದ್ಗೆ ಕರೆನೀಡಲಾಗಿದೆ.