ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪ್ರಧಾನಿಗೆ ಪತ್ರ ಬರೆದ ಮೋದಿ, ಶಿಂದೆ ವಿರುದ್ಧ ಕ್ರಮಕ್ಕೆ ಒತ್ತಾಯ

ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಬುಧವಾರ ಪ್ರಧಾನಮಂತ್ರಿ ಮನಮೋಹನ್ ..

Lingaraj Badiger
Updated On : 15 Jan 2014, 8:02 am

ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಬುಧವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು, ಕೇಂದ್ರ ಗೃಹ ಸಚಿವ ಸಶೀಲ್ ಕುಮಾರ್ ಶಿಂದೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಇತ್ತೀಚಿಗಷ್ಟೆ ಸುಶೀಲ್ ಕುಮಾರ್ ಶಿಂದೆ ಅವರು ಉಗ್ರ ಕೃತ್ಯಗಳ ಸಂಬಂಧ ಸುಖಾಸುಮ್ಮನೆ ಅಲ್ಪಸಂಖ್ಯಾತರನ್ನು ಬಂಧಿಸಬೇಡಿ ಮತ್ತು ಈಗಾಗಲೇ ಬಂಧಿಸಲಾಗಿರುವ ಶಂಕಿತ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.

ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಮೋದಿ, ಗೃಹ ಸಚಿವರ ಸಲಹೆ ದೇಶದ ಕಾನೂನಿಗೆ ವಿರದ್ಧವಾಗಿದೆ ಎಂದಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಪ್ರಧಾನಿ ಅವರು ಮಧ್ಯಸ್ಥಿಕೆ ವಹಿಸಬೇಕು ಮತ್ತು ಶಿಂದೆ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಟ್ವಿಟ್ ಮಾಡಿದ್ದಾರೆ.

ಪ್ರಧಾನಿಗೆ ಬರೆದ ಪತ್ರದಲ್ಲಿ, ಶಿಂದೆ ಅವರು ಪದೇಪದೆ ಅಲ್ಪಸಂಖ್ಯಾತರನ್ನು ಬಂಧಿಸುವಾಗ ಎಚ್ಚರ ವಹಿಸುವಂತೆ ಹೇಳುತ್ತಿದ್ದಾರೆ. ಶಿಂದೆಯವರ ಈ ಹೇಳಿಕೆ ದೇಶಕ್ಕೆ ತಪ್ಪು ಸಂದೇಶ ನೀಡಬಹುದು. ಹೀಗಾಗಿ ಕೇವಲ ಒಂದು ನಿರ್ಧಿಷ್ಟ ವರ್ಗದತ್ತ ಮಾತ್ರ ಗಮನಹರಿಸದಂತೆ ಶಿಂದೆಗೆ ಸಲಹೆ ನೀಡುವಂತೆ ಮೋದಿ ಪ್ರಧಾನಿಗೆ ಮನವಿ ಮಾಡಿದ್ದಾರೆ.

ಅಪರಾಧಕ್ಕೆ ಜಾತಿ, ಧರ್ಮ ಎನ್ನುವುದಿಲ್ಲ. ಅಪರಾಧ ಮಾಡಿದವನು ಯಾರೇ ಆಗಿದ್ದರೂ ಆತ ಅಪರಾಧಿನೇ. ಧಾರ್ಮಿಕ ನಂಬಿಕೆಗಳು ಆತನನ್ನು ನಿರಪರಾಧಿಯನ್ನಾಗಿ ಮಾಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ಭದ್ರತೆಯ ವಿಚಾರದಲ್ಲೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವೋಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement