ಯುಒ; ಭಾರತ, ಚೀನಾ ಹಿಂದೆ ಬೀಳುತ್ತಿದೆ: ಜಾರ್ಜ್ ಓಸ್ಬೋರ್ನೆ
ಲಂಡನ್: ಯುರೋಪಿನ್ ಒಕ್ಕೂಟ(ಯುಒ) ಭಾರತ ಮತ್ತು ಚೀನಾ ಹಿಂದೆ ಬೀಳುತ್ತಿದೆ ಅದನ್ನು ತಡೆಗಟ್ಟಬೇಕು ಮತ್ತು ಸುಧಾರಣೆ ತರಬೇಕು ಎಂದು ಬ್ರಿಟಿಷ್ ವಿತ್ತ ಸಚಿವ ಜಾರ್ಜ್ ಓಸ್ಬೋರ್ನೆ ಅವರು ಬುಧವಾರ ಎಚ್ಚರಿಸಿದ್ದಾರೆ.
ಸುಧಾರಣೆ ಅಥವಾ ಕುಸಿತ ಇದು ಯುರೋಪ್ನ ಸರಳ ಆಯ್ಕೆ. ಆದರೆ ಈ ಹಾದಿಯಲ್ಲಿ ಹೋಗಲು ಸಾಧ್ಯವಿಲ್ಲ. ಪ್ರಸ್ತುತ ಅಭಿವೃದ್ಧಿಯ ವಿಷಯದಲ್ಲಿ ಅವನತಿಯನ್ನು ತಡೆಯಬೇಕಿದೆ ಎಂದು ಯುರೋಸ್ಕೀಪ್ಟಿಕ್ನ ಸಭೆಯಲ್ಲಿ ಓಸ್ಬೋರ್ನೆ ಅವರು ತಿಳಿಸಿದ್ದಾರೆ.
ಬ್ರಿಟಿಷ್ ಪಾರ್ಲಿಮೆಂಟ್ನಲ್ಲಿ ಸಂಸದರು ಯುರೋಪ್ ಒಕ್ಕೂಟದ ಕಾನೂನುಗಳನ್ನು ನಿರ್ಬಂಧಿಸುವಂತೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಯುರೋಪ್ ಮತ್ತು ಫ್ರೆಶ್ ಸ್ಟಾರ್ಟ್ ಗ್ರೂಪ್ ವತಿಯಿಂದ ಈ ಸಮಾರಂಭವನ್ನು ಆಯೋಜಿಸಲಾಗಿತ್ತು.