ನಾವು ಚೆನ್ನಾಗಿಯೇ ಇದ್ದೀವಿ: ತರೂರ್ ದಂಪತಿ
ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದ ತರೂರ್ ಅವರು ತಮ್ಮ ಪತಿಗೆ ಪಾಕಿಸ್ತಾನದ ಪತ್ರಕರ್ತೆಯೊಂದಿಗೆ...
ನವದೆಹಲಿ: ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದ ತರೂರ್ ಅವರು ತಮ್ಮ ಪತಿಗೆ ಪಾಕಿಸ್ತಾನದ ಪತ್ರಕರ್ತೆಯೊಂದಿಗೆ ಸಂಬಂಧವಿದೆ ಎಂದು ಟ್ವಿಟರ್ನಲ್ಲಿ ವಿವಾದಾತ್ಮಕ ಟ್ವೀಟ್ ಬಗ್ಗೆ ಶಶಿ ತರೂರ್ ದಂಪತಿ ಇದೀಗ ಸ್ಪಷ್ಟನೆ ನೀಡಿದ್ದಾರೆ.
ಶಶಿ ತರೂರ್ ಅವರಿಗೆ ಪಾಕಿಸ್ತಾನದ ಪತ್ರಕರ್ತೆಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿದ್ದ ಪತ್ನಿ ಸುನಂದ, ತರೂರ್ ಅವರಿಂದ ವಿಚ್ಛೇಧನ ಬೇಕು ಎಂದು ಹೇಳಿರುವುದಾಗಿಯೂ ಟ್ವೀಟ್ ಮಾಡಲಾಗಿತ್ತು. ಈ ಟ್ವೀಟ್ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ. ನನ್ನ ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಲಾಗಿದ್ದು, ಯಾರೋ ಸುಳ್ಳು ಹೇಳಿಕೆಗಳನ್ನು ಟ್ವೀಟ್ ಮಾಡಿದ್ದಾರೆ ಎಂದು ಸುನಂದ ಮತ್ತು ಶಶಿ ತರೂರ್ ಜಂಟಿಯಾಗಿ ಹೇಳಿಕೆ ನೀಡಿದ್ದಾರೆ.
ನಾವು ನಮ್ಮ ದಾಂಪತ್ಯ ಜೀವನದಲ್ಲಿ ಚೆನ್ನಾಗಿದ್ದೇವೆ. ನಮಲ್ಲಿ ಯಾವುದೇ ಮನಃಸ್ತಾಪವಿಲ್ಲ ಎಂದು ಸುನಂದ ತರೂರ್ ಸ್ಫಷ್ಟಪಡಿಸಿದ್ದಾರೆ.
ಇದೀಗ ವಿವಾದಾತ್ಮಕ ಹೇಳಿಕೆಯನ್ನು ಟ್ವೀಟರ್ನಿಂದ ತೆಗೆದು ಹಾಕಲಾಗಿದೆ. ಏತನ್ಮಧ್ಯೆ, ಇವರಿಬ್ಬರ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿರುವ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.