ಮಾದ್ಯಮಗಳಿಗೆ ತಡೆ ಹಾಕಿದ ದೆಹಲಿ ಹೈಕೋರ್ಟ್
ನವದೆಹಲಿ: ನಿವೃತ್ತ ನ್ಯಾಯಾಮೂರ್ತಿ ಸ್ವತಂತ್ರ ಕುಮಾರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧಿಸದಂತೆ ವರದಿ ಪ್ರಕಟಿಸಿದಂತೆ ದೆಹಲಿ ಹೈಕೊರ್ಟ್ ಮಾದ್ಯಮಗಳಿಗೆ ತಡೆ ಹಾಕಿದೆ.
ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ನಿವೃತ್ತ ನ್ಯಾಯಾಮೂರ್ತಿಗಳ ಭಾವಚಿತ್ರಗಳನ್ನು ಟಿವಿಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಪ್ರಕಟಿಸಬಾರದು. ಅಂತರ್ಜಾಲದಲ್ಲೂ ನಿವೃತ್ತ ನ್ಯಾಯಾಧೀಶರ ಛಾಯಚಿತ್ರ ಪ್ರಕಟಿಸಿದಂತೆ ನ್ಯಾಯಾಲಯ ಮಾದ್ಯಮಗಳಿಗೆ ಸೂಚಿಸಿದೆ. ಇದಲ್ಲದೇ ಈಗಾಗಲೇ ಅಂತರ್ಜಾಲದಲ್ಲಿ ಪ್ರಕಟಿಸಿರುವ ಸ್ವತಂತ್ರಕುಮಾರ್ ಅವರ ಭಾವಚಿತ್ರಗಳನ್ನು ತೆಗೆದು ಹಾಕಿ ಎಂದು ನ್ಯಾಯಾಮೂರ್ತಿ ಮನಮೋಹನ್ ಈ ಆದೇಶ ಹೊರಡಿಸಿದ್ದಾರೆ.
ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದ ವರದಿ ಪ್ರಕಟಿಸದಂತೆ ಮಾಧ್ಯಮ ಮೇಲೆ ನಿಯಂತ್ರಣ ಹೇರುವಂತೆ ಕೋರಿ ನ್ಯಾ. ಸ್ವತಂತ್ರ ಕುಮಾರ್ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಪ್ರಕರಣ ಸಂಬಂಧಿಸಿದ ದೂರಿನ ಮಾಹಿತಿ ಬಹಿರಂಗಪಡಿಸಿದ ಹಿನ್ನಲೆಯಲ್ಲಿ 2 ಇಂಗ್ಲೀಷ್ ಸುದ್ದಿವಾಹಿನಿಗಳು, ಇಂಗ್ಲೀಷ್ ಪತ್ರಿಕೆ ವಿರುದ್ಧ 5 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು ಮಾದ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ. ಅರ್ಜಿ ವಿಚಾರಣೆಯನ್ನು ಫೆಭ್ರವರಿ 24ಕ್ಕೆ ಮುಂದೂಡಿದೆ.