ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವಿದೇಶಿ ಮಹಿಳೆ ಗ್ಯಾಂಗ್‌ರೇಪ್ : ಇಬ್ಬರ ಬಂಧನ

ವಿದೇಶಿ ಮಹಿಳೆ ಮೇಲೆ ನಿನ್ನೆ ಸಾಮಾಹಿಕ ಅತ್ಯಾಚಾರವೆಸಗಿದ ಆರೋಪಿಗಳಲ್ಲಿ ಇಬ್ಬರನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ...

Mainashree
Updated On : 16 Jan 2014, 3:29 am

ನವದೆಹಲಿ: ವಿದೇಶಿ ಮಹಿಳೆ ಮೇಲೆ ನಿನ್ನೆ ಸಾಮಾಹಿಕ ಅತ್ಯಾಚಾರವೆಸಗಿದ ಆರೋಪಿಗಳಲ್ಲಿ ಇಬ್ಬರನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಮೊಹ್ದ್ ರಾಜ (22) ಹಾಗೂ ಮಹಾರಾಷ್ಟ್ರದ ಗಂಜಾ(25) ಎಂಬ ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಶಿವಾಜಿ ಉದ್ಯಾನವನದ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಇನ್ನುಳಿದ ಆರು ಆರೋಪಿಗಳನ್ನು ಬಂಧಿಸಲು ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಲಾಗುವುದು ಎಂದು ಅವರು ಹೇಳಿದ್ದಾರೆ.

ಕನ್ನೌಟ್ ಬಳಿಯ ಮ್ಯೂಸಿಯಂಗೆ ತೆರಳಿದ್ದ ಮಹಿಳೆ ತಾನು ಉಳಿದುಕೊಂಡಿದ್ದ ಹೋಟೆಲ್‌ಗೆ ಹಿಂತಿರುಗುವಾಗ ದಾರಿ ತಪ್ಪಿದ್ದರು. ಈ ವೇಳೆ ಮಹಿಳೆ ರಸ್ತೆಯಲ್ಲಿ ನಿಂತಿದ್ದ ಗುಂಪೊಂದರ ನೆರವು ಯಾಚಿಸಿದ್ದರು. ಆ ಗುಂಪು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಹಣ, ಮೊಬೈಲ್, ಐಪಾಡ್ ಲೂಟಿ ಮಾಡಿ, ಬಳಿಕ ಚೂರಿ ತೋರಿಸಿ ಬೆದರಿಸಿ ಅತ್ಯಾಚಾರ ನಡೆಸಿದ್ದಾರೆ ಎಂದು ವಿದೇಶಿ ಮಹಿಳೆ ದೂರು ನೀಡಿದ್ದಾರೆ.

ಡೆನ್ಮಾರ್ಕ್‌ನ 51 ವರ್ಷದ ಮಹಿಳಾ ಪ್ರವಾಸಿಗರೊಬ್ಬರ ಮೇಲೆ ದುಷ್ಕರ್ಮಿಗಳು ಹಾಡಹಗಲೇ ಅತ್ಯಾಚಾರವೆಸಗಿ ಪರಾರಿಯಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement