ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಈಗ ಮಾಧ್ಯಮದ ವಿರುದ್ಧವೇ ತಿರುಗಿ ಬಿದ್ದ ಆಪ್

ದೆಹಲಿ ಪೊಲೀಸರ ವಕ್ತಾರರಂತೆ ಮಾಧ್ಯಮಗಳು ವರ್ತಿಸುತ್ತಿವೆ ಎಂದು ಆಮ್ ಅದ್ಮಿ ಪಕ್ಷ ಶುಕ್ರವಾರ ಕಿಡಿಕಾರಿದ್ದಾರೆ...

Mainashree
Updated On : 17 Jan 2014, 3:53 am

ನವದೆಹಲಿ: ದೆಹಲಿ ಪೊಲೀಸರ ವಕ್ತಾರರಂತೆ ಮಾಧ್ಯಮಗಳು ವರ್ತಿಸುತ್ತಿವೆ ಎಂದು ಆಮ್ ಅದ್ಮಿ ಪಕ್ಷ ಶುಕ್ರವಾರ ಕಿಡಿಕಾರಿದ್ದಾರೆ.

ದೆಹಲಿ ಪೊಲೀಸರ ವಕ್ತಾರರಂತೆ ವರ್ತಿಸಬೇಡಿ ಎಂದು ಮಾಧ್ಯಮಗಳಿಗೆ ಎಎಪಿ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಎಎಪಿ ನಾಯಕರು ಒತ್ತಡ ಹೇರಿದ್ದರು. ಈ ಸಂಬಂಧ ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, ಪತ್ರಕರ್ತರ ವಿರುದ್ಧವೇ ಮನೀಶ್ ಅವರು ಕಿಡಿಕಾರಿದ್ದಾರೆ.

ಎಎಪಿ ಸಚಿವರ ವಿರುದ್ಧ ದೆಹಲಿ ಪೊಲೀಸರು ಉಪರಾಜ್ಯಪಾಲರಿಗೆ ದೂರು ನೀಡಿದ್ದರು. ಈ ಸಂಬಂಧ ಎಎಪಿ ಸರ್ಕಾರ ಇಂದು ಉಪರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement