ಜನ ಸಾಮಾನ್ಯರಿಗೆ ಅಧಿಕಾರ ನೀಡಿ: ರಾಜನಾಥ್ ಸಿಂಗ್
ಜನ ಸಾಮಾನ್ಯರಿಗೂ ಅಧಿಕಾರ ನೀಡಿ ಎಂದು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ...
ನವದೆಹಲಿ: ಜನ ಸಾಮಾನ್ಯರಿಗೂ ಅಧಿಕಾರ ನೀಡಿ ಎಂದು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
ದೇಶದ ಪ್ರತಿಯೊಬ್ಬ ನಾಗರಿಕನಿಗೆ ಉದ್ಯೋಗದ ಅವಶ್ಯಕತೆ ಇದೆ. ನಿರುದ್ಯೋಗದ ಸಮಸ್ಯೆ ಬಗೆ ಹರಿಸಿ, ಸಾಮಾನ್ಯನಿಗೂ ಅಧಿಕಾರ ನೀಡಿ ಉತ್ತೇಜಿಸಬೇಕು ಎಂದು ಸಿಂಗ್ ತಿಳಿಸಿದ್ದಾರೆ.
ಭಾರತಕ್ಕೆ ಪೂರ್ಣ ಸ್ವಾತಂತ್ರ್ಯ ಬೇಕಾಗಿದೆ. ಪೂರ್ಣ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಪ್ರತಿಯೊಬ್ಬ ನಾಗರಿಕನು ಉದ್ಯೋಗಿಯಾಗಲು ಸಾಧ್ಯ ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬರದಂತೆ ವಿದೇಶಿ ಶಕ್ತಿಗಳು ಹುನ್ನಾರ ನಡೆಸುತ್ತಿವೆ. ಆದರೆ ಜನತೆ ಬಿಜೆಪಿ ಕೈ ಬಿಡುವುದಿಲ್ಲ. ವಿದೇಶಿಗಳ ಹುನ್ನಾರಕ್ಕೆ ಬಿಜೆಪಿ ಬಗ್ಗುವುದಿಲ್ಲ ಎಂದು ಅವರು ಹೇಳಿದ್ದಾರೆ.