ಮಾಯಾವತಿ ಮತ್ತು ಸಿಬಿಐಗೆ ಸುಪ್ರೀಂ ನೋಟೀಸ್
ಮಾಜಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಮತ್ತು ಕೇಂದ್ರ ತನಿಖಾ ತಂಡ(ಸಿಬಿಐ)ಗೆ ಸುಪ್ರೀಂ...
ನವದೆಹಲಿ: ಮಾಜಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಮತ್ತು ಕೇಂದ್ರ ತನಿಖಾ ತಂಡ(ಸಿಬಿಐ)ಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟೀಸ್ ಜಾರಿ ಮಾಡಿದೆ.
ಮಾಯಾವತಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸಲು ಮಾಯಾವತಿ ಮತ್ತು ಸಿಬಿಐಗೆ ಸುಪ್ರೀಂ ನೋಟೀಸ್ ನೀಡಿದೆ.
ಅಕ್ರಮ ಆಸ್ತಿ ಗಳಿಕೆ ಸಂಬಂಧಿಸಿದಂತೆ ಹೊಸದಾಗಿ ಎಫ್ಐಆರ್ ದಾಖಲಿಸಲು ಅನುಮತಿ ನೀಡುವಂತೆ ಕೋರಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಮಾಯಾವತಿ ಮತ್ತು ಸಿಬಿಐಗೆ ನೋಟೀಸ್ ನೀಡಿದೆ.
ನೋಟೀಸ್ಗೆ ನಾಲ್ಕು ವಾರದೊಳಗೆ ಉತ್ತರಿಸುವಂತೆ ಮಾಯವತಿ, ಸಿಬಿಐ ಹಾಗೂ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
2012 ಜುಲೈ 6ರಂದು ಸುಪ್ರೀಂ ಕೋರ್ಟ್ 9 ವರ್ಷ ಹಳೆಯದಾದ ಮಾಯಾವತಿ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ರದ್ದುಗೊಳಿಸಿತ್ತು.