ಮೋದಿ ಟೀ ಮಾರುವುದಕ್ಕೇ ಲಾಯಕ್ಕು: ಅಯ್ಯರ್
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಟೀ ಮಾರುವುದಕ್ಕೇ ಯೋಗ್ಯ ಎಂದು ಕಾಂಗ್ರೆಸ್ ನಾಯಕ ಮಣಿ ಶಂಕರ್...
ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಟೀ ಮಾರುವುದಕ್ಕೇ ಯೋಗ್ಯ ಎಂದು ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಶುಕ್ರವಾರ ವ್ಯಂಗ್ಯವಾಡಿದ್ದಾರೆ.
ಟೀ ಮಾರುವುದಕ್ಕೆ ಯೋಗ್ಯವಾಗಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧಿವೇಶನದಲ್ಲಿ ಟೀ ಮಾರಲು ಬರಬಹುದು ಎಂದು ಹೇಳಿದ್ದಾರೆ.
21ನೇ ಶತಮಾನದಲ್ಲಿ ಮೋದಿ ಪ್ರಧಾನಿಯಾಗವುದಿಲ್ಲ. ಮೋದಿ ಪ್ರಧಾನಿಯಾಗುವ ಕನಸು ಕಾಣಬಾರದು ಎಂದ ಅವರು, ಮೋದಿ ದೇಶ ಆಳುವುದಕ್ಕಿಂತ ಟೀ ಮಾರುವುದಕ್ಕೆ ಯೋಗ್ಯ ಎಂದು ಅಯ್ಯರ್ ಟೀಕಿಸಿದ್ದಾರೆ.
ಎಐಸಿಸಿ ಅಧಿವೇಶನದಲ್ಲಿ ಮೋದಿ ಟೀ ಮಾರಲು ಇಚ್ಛಿಸಿದರೆ ಅದಕ್ಕೆ ನಾವು ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಹೇಳುವ ಮುಖಾಂತರ ಅಯ್ಯರ್ ವಿವಾದಕ್ಕೀಡಾಗಿದ್ದಾರೆ.
ಈ ಹಿಂದೆ ಮೋದಿ ಅವರನ್ನು ಜೋಕರ್ ಎಂದು ಅಯ್ಯರ್ ಕರೆದಿದ್ದರು. ಇದರ ಬೆನ್ನಲ್ಲೇ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.