ಸುನಂದಾಗೆ ಕಾಯಿಲೆ ಇತ್ತು?
ದೆಹಲಿಯ ಲೀಲಾ ಹೋಟೆಲ್ನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಸುನಂದಾ ಪುಷ್ಕರ್ ಲೂಪಸ್ ಮತ್ತು ಉದರದ ಕ್ಷಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ...
ನವದೆಹಲಿ: ದೆಹಲಿಯ ಲೀಲಾ ಹೋಟೆಲ್ನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಸುನಂದಾ ಪುಷ್ಕರ್ ಲೂಪಸ್ ಮತ್ತು ಉದರದ ಕ್ಷಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಕೇಂದ್ರ ಸಚಿವ ಶಶಿತರೂರು ಅವರ ಪತ್ನಿ ಸುನಂದಾ ಪುಷ್ಕರ್ ಮೃತದೇಹ ಶುಕ್ರವಾರ ರಾತ್ರಿ ದೆಹಲಿಯ ಲೀಲಾ ಹೊಟೇಲ್‌ನಲ್ಲಿ ಪತ್ತೆಯಾಗಿತ್ತು.
ಹೊಟೇಲ್‌ನ ಕೊಠಡಿ ಸಂಖ್ಯೆ 345ರಲ್ಲಿ ಸುನಂದ ಪುಷ್ಕರ್ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಈ ವೇಳೆ ತಪಾಸಣೆ ನಡೆಸುತ್ತಿರುವ ಪೊಲೀಸರು ಕೊಠಡಿಯಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಸುನಂದಾ ಪುಷ್ಕರ್ ಅವರ ಕಡೇಯ ಟ್ವೀಟ್: "ಯಾರು ಜೀವನವನ್ನು ಗಂಭೀರವಾಗಿ ಪರಿಗಣಿಸಬೇಡಿ. ಇಲ್ಲಿ ಯಾರೂ ಶಾಶ್ವತರಲ್ಲ" ಎಂದು ಕೊನೆಯದಾಗಿ ಬರೆದುಕೊಂಡಿದ್ದಾರೆ.
ಓ ಮೈ ಗಾಡ್! ವಾಟ್ ದಿ ಹೆಲ್: ತರಾರ್
ಮೆಹರ್ ತರಾರ್(ಸುನಂದಾ ಜೊತೆ ಟ್ವಿಟ್ಟರ್ನಲ್ಲಿ ವಿವಾದದಲ್ಲಿದ್ದ) ಪಾಕಿಸ್ತಾನಿ ಪತ್ರಕರ್ತೆಯ ಉದ್ಘಾರ ವಾಟ್ ದಿ ಹೆಲ್? ಸುನಂದಾ ಓ ಮೈ ಗಾಡ್? ಎಂದು ಕೂಡಲೇ ಟ್ವೀಟ್ ಮಾಡಿದ್ದಾರೆ.