ಅಧಿಕ ಪ್ರಮಾಣದ ಔಷಧಿ ಸೇವನೆ ಸುನಂದಾ ಸಾವಿಗೆ ಕಾರಣ?
ಶುಕ್ರವಾರ ರಾತ್ರಿ ಶಂಕಾಸ್ಪದವಾಗಿ ಸಾವನ್ನಪ್ಪಿದ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಶವಪರೀಕ್ಷೆ ಶನಿವಾರ...
ನವದೆಹಲಿ: ಶುಕ್ರವಾರ ರಾತ್ರಿ ಶಂಕಾಸ್ಪದವಾಗಿ ಸಾವನ್ನಪ್ಪಿದ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಶವಪರೀಕ್ಷೆ ಶನಿವಾರ ಮಧ್ಯಾಹ್ನ 12.10ಕ್ಕೆ ನಡೆದಿದೆ.
ಎಐಐಎಂಎಸ್ ಆಸ್ಪತ್ರೆಯಲ್ಲಿ ಮೂವರು ವೈದ್ಯರ ತಂಡ ಸುನಂದಾ ಪುಷ್ಕರ್ ಅವರ ಶವ ಪರೀಕ್ಷೆ ನಡೆಸಿದೆ. ಶವಪರೀಕ್ಷೆ ಮಧ್ಯಾಹ್ನ 2 ಗಂಟೆಯ ವೇಳೆಗೆ ಪೂರ್ಣಗೊಳ್ಳಲಿದ್ದು, ಮರಣೋತ್ತರ ಪರೀಕ್ಷಾ ವರದಿಯನ್ನು ಉಪ ವಿಭಾಗೀಯ ನ್ಯಾಯಾಧೀಶರಿಗೆ ಸಲ್ಲಿಸಲಾಗುವುದು.
ಆಕಸ್ಮಿಕವಾಗಿ ಅಧಿಕ ಪ್ರಮಾಣದಲ್ಲಿ ಔಷಧ ಸೇವನೆ ಮಾಡಿರುವ ಪರಿಣಾಮ ಸುನಂದಾ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಹೇಳಿರುವುದಾಗಿ ಕೆಲವೊಂದು ಸುದ್ದಿ ಮೂಲಗಳು ವರದಿ ಮಾಡಿವೆ.
ಅದೇ ವೇಳೆ ಸುನಂದಾ ಮತ್ತು ಶಶಿ ತರೂರ್ ನಡುವೆ ನಡೆದ ಬ್ಲಾಕ್‌ಬ್ರೆರಿ ಸಂದೇಶ ವಿನಿಮಯ ಬಗ್ಗೆಯೂ ಪೊಲೀಸ್ ತನಿಖೆ ನಡೆಸಲಿದ್ದಾರೆ.