ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಸ್ಸಾಂನಲ್ಲಿ ಉಗ್ರರ ದಾಳಿ: ಐವರು ಸಾವು

ಬಸ್‌ನ್ನು ತಡೆದು ನಿಲ್ಲಿಸಿದ ಉಗ್ರರು ಹಿಂದಿ ಮಾತಾಡುತ್ತಿದ್ದ ಐವರನ್ನು ಕೊಂದಿರುವ ಘಟನೆ ಅಸ್ಸಾಂ ಕೊಕ್ರಾಜರ್‌ನಲ್ಲಿ ಶನಿವಾರ ನಡೆದಿದೆ...

Mainashree
Updated On : 18 Jan 2014, 6:31 am

ಕೊಕ್ರಾಜರ್: ಬಸ್‌ನ್ನು ತಡೆದು ನಿಲ್ಲಿಸಿದ ಉಗ್ರರು ಹಿಂದಿ ಮಾತಾಡುತ್ತಿದ್ದ ಐವರನ್ನು ಕೊಂದಿರುವ ಘಟನೆ ಅಸ್ಸಾಂ ಕೊಕ್ರಾಜರ್‌ನಲ್ಲಿ ಶನಿವಾರ ನಡೆದಿದೆ.

ಮೃತಪಟ್ಟವರನ್ನು ಪಾಪು ಕುಮಾರ್ ಸಿಂಗ್(25), ಶಮ್‌ಶೀರ್ ಮಂತ್ರಿ(20), ಅಹೋಟ್ ಬಿಹಾರಿ(20) ಮತ್ತು ರಾಜ್ ಬಿಹಾರಿ ಎಂದು ಗುರುತಿಸಲಾಗಿದೆ.

ಪಶ್ಚಿಮ ಬಂಗಾಳದ ಸಿಲಿಗುರಿಯಿಂದ ಮೇಘಾಲಯದ ಶಿಲ್ಲಾಂಗ್‌ಗೆ ತೆರಳುತ್ತಿದ್ದ ಬಸ್ಸನ್ನು ಅಡ್ಡಗಟ್ಟಿದ ಉಗ್ರರು ಪ್ರಯಾಣಿಕರಿಗೆ ಬಸ್‌ನಿಂದ ಇಳಿಯುವಂತೆ ಸೂಚಿಸಿದ್ದಾರೆ. ಪ್ರಯಾಣಿಕರನ್ನು ಒಂದೇ ಸಾಲಿನಲ್ಲಿ ನಿಲ್ಲಿಸಿ, ಅವರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಾಯಗೊಂಡವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement