ಆದರ್ಶ ಹಗರಣ: ಸಿಬಿಐ ಅರ್ಜಿ ವಜಾ
ಆದರ್ಶ ಹಗರಣದ ಪ್ರಕರಣ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯಿಂದ ಮಹಾರಾಷ್ಟ್ರದ ಮಾಜಿ...
ಮುಂಬೈ: ಆದರ್ಶ ಹಗರಣದ ಪ್ರಕರಣ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯಿಂದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಅವರ ಹೆಸರು ಕೈಬಿಡುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷಾ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.
ನ್ಯಾಯಾಮೂರ್ತಿಗಳಾದ ಎಸ್ ಜಿ ಡಿಗ್ಗೇ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಚವ್ಹಾಣ್ ಸೇರಿದಂತೆ 12 ಜನರ ಮೇಲೆ ದೋಷರೋಪ, ಮೋಸ, ಅಧಿಕಾರ ದುರಪಯೋಗ ಮತ್ತು ಭ್ರಷ್ಟಾಚಾರ ಕಾಯ್ದೆ ಅಡಿ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಆದರೆ ಇತ್ತೀಚೆಗಷ್ಟೇ ಚವ್ಹಾಣ್ ಅವರ ಹೆಸರನ್ನು ದೋಷಾರೋಪ ಪಟ್ಟಿಯಿಂದ ಕೈಬಿಡುವಂತೆ ಕೋರಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಸಿಬಿಐ ಅರ್ಜಿಯನ್ನು ತಿರಸ್ಕರಿಸಿದೆ.