ತರೂರ್ ಕಚೇರಿ, ನಿವಾಸಕ್ಕೆ ಬಿಗಿ ಭದ್ರತೆ
ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಸಾವಿನ ಹಿನ್ನೆಲೆಯಲ್ಲಿ ಶಶಿ ತರೂರ್ ಅವರು ಕಚೇರಿ ಮತ್ತು...
ನವದೆಹಲಿ: ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಸಾವಿನ ಹಿನ್ನೆಲೆಯಲ್ಲಿ ಶಶಿ ತರೂರ್ ಅವರು ಕಚೇರಿ ಮತ್ತು ಕೇರಳದಲ್ಲಿರುವ ಅವರ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.
ತಿರುವನಂತಪುರಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ತರೂರ್ ಅವರ ನಿವಾಸ ಕೇರಳ ವಿಧಾನಸೌಧದ ಪಕ್ಕದಲ್ಲೇ ಇದೆ.
ನಿನ್ನೆ ರಾತ್ರಿ ಸುನಂದಾ ಅವರ ಸಾವಿನ ಸುದ್ದಿ ಕೇಳಿಬರುತ್ತಿದ್ದಂತೆಯೇ ಕೇರಳ ರಾಜ್ಯ ಪೊಲೀಸರು ತರೂರ್ ನಿವಾಸ ಮತ್ತು ಕಚೇರಿಗೆ ಬಿಗಿ ಭದ್ರತೆಯನ್ನೊದಗಿಸಿದ್ದರು.