ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದವೂದಿ ಬೊಹ್ರಾ ಧಾರ್ಮಿಕ ಮುಖಂಡನ ಅಂತ್ಯಕ್ರಿಯೆ ವೇಳೆ ಕಾಲ್ತುಳಿತ: 18 ಸಾವು

ದವೂದಿ ಬೊಹ್ರಾ ಧಾರ್ಮಿಕ ಮುಖಂಡ ಸೈಯೇದ್ನಾ ಮೊಹಮ್ಮದ್ ಬುಹ್ರನುದ್ದೀನ್ ಅವರ ಅಂತಿಮ ದರ್ಶನದ ವೇಳೆ ಕಾಲ್ತುಳಿತ...

Rashmi Kasaragodu
Updated On : 18 Jan 2014, 6:36 am

ಮುಂಬೈ: ದವೂದಿ ಬೊಹ್ರಾ ಧಾರ್ಮಿಕ ಮುಖಂಡ ಸೈಯೇದ್ನಾ ಮೊಹಮ್ಮದ್ ಬುಹ್ರನುದ್ದೀನ್ ಅವರ ಅಂತಿಮ ದರ್ಶನದ ವೇಳೆ ಕಾಲ್ತುಳಿತ ಸಂಭವಿಸಿ 18 ಜನರು ಸಾವಿಗೀಡಾಗಿದ ಘಟನೆ ವರದಿಯಾಗಿದೆ.

ಬುಹ್ರನುದ್ದೀನ್ ಶುಕ್ರವಾರ ಬೆಳಗ್ಗೆ ಅಸುನೀಗಿದ್ದು, ಶನಿವಾರ ಮಲಬಾರ್ ಹಿಲ್ಸ್‌ನಲ್ಲಿರುವ ಅವರ ನಿವಾಸದಲ್ಲಿ ಅಂತಿಮದರ್ಶನಕ್ಕಾಗಿ ಇರಿಸಲಾಗಿತ್ತು. ಈ ವೇಳೆ ಅಂತಿಮ ದರ್ಶನಕ್ಕಾಗಿ ಬಂದ ಜನರು ನೂಕುನುಗ್ಗಲು ಉಂಟು ಮಾಡಿದ್ದು, ಇದರಲ್ಲಿ 18 ಜನರು ಸಾವಿಗೀಡಾಗಿದ್ದಾರೆ. ಮಾತ್ರವಲ್ಲದೆ 40 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸೈಫಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೈಯೇದ್ನಾ ಅವರ ಮೃತದೇಹವನ್ನು ಸೈಫೀ ಮಹಲ್‌ನಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ಅಂತಿಮ ದರ್ಶನ ಪಡೆಯಲು ಸಾವಿರಾರು ಮಂದಿ ಆಗಮಿಸಿದ್ದು ಬೆಳಗ್ಗಿನ ಜಾವ 1.30ಕ್ಕೆ ಕಾಲ್ತುಳಿತ ಸಂಭವಿಸಿದೆ.

ಶನಿವಾರ ಬೆಳಗ್ಗೆ ದಕ್ಷಿಣ ಮುಂಬೈಯ ಬೆಂಡಿ ಬಜಾರ್‌ನ ರೌದತ್ ತೆಹ್ರಾ ಮೈಸೋಲೇನಮ್‌ನಲ್ಲಿ ಸೈಯೇದ್ನಾ ಅವರನ್ನು ಅಂತ್ಯ ಸಂಸ್ಕಾರ ಮಾಡಲಾಗಿದೆ.

ದವೂದಿ ಬೊಹ್ರಾ ಸಮುದಾಯದ ಮುಖಂಡರಾಗಿರುವ ಸೈಯೇದ್ನಾ ಶುಕ್ರವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರಿಗೆ 102 ವಯಸ್ಸಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement