ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದೆಹಲಿ ಸಿಎಂ ಕೇಜ್ರಿವಾಲ್‌ಗೆ 3 ಕೋಣೆಯ ಮನೆ

ಮನೆ ಹುಡುಕಾಟದಲ್ಲಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಲುಟೆನ್ಸ್ ಝೋನ್‌ನಲ್ಲಿರುವ ತಿಲಕ್ ಲೇನ್...

Mainashree
Updated On : 18 Jan 2014, 4:30 am

ನವದೆಹಲಿ: ಮನೆ ಹುಡುಕಾಟದಲ್ಲಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಲುಟೆನ್ಸ್ ಝೋನ್‌ನಲ್ಲಿರುವ ತಿಲಕ್ ಲೇನ್ ಅಪಾರ್ಟ್‌ಮೆಂಟ್ಸ್‌ನಲ್ಲಿ ಮೂರು ಬೆಡ್ ರೂಂ ಒಳಗೊಂಡ ಫ್ಲಾಟ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಗರಾಭೀವೃದ್ಧಿ ಸಚಿವಾಲಯ 3 ಬೆಡ್ ರೂಂ ಇರುವ ಮನೆಯನ್ನು ಅರವಿಂದ್ ಕೇಜ್ರಿವಾಲ್‌ಗೆ ನೀಡಿದೆ ಎಂದು ತಿಳಿದು ಬಂದಿದೆ.

ಗ್ರೌಂಡ್ ಫ್ಲೋರ್‌ನಲ್ಲಿ 1,600 ಚದರಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಾಣವಾಗಿದೆ.  

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸೂಕ್ತವಾದ ಮನೆ ನೀಡುವಂತೆ ದೆಹಲಿ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು.

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿಗಳ ಬಂಗಲೆಯನ್ನು ಪಡೆಯಲು ನಿರಾಕರಿಸಿದ್ದರು. ಈ ಹಿನ್ನಲೆಯಲ್ಲಿ ಅವರಿಗೆ ಐದು ಕೋಣೆಗಳ ಸರ್ಕಾರಿ ಫ್ಲಾಟ್ ನೀಡಲಾಗಿತ್ತು. ಆದರೆ ಕೇಜ್ರಿವಾಲ್ ಅವರು ಇದನ್ನು ನಿರಾಕರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement