ದೇವಯಾನಿ ಪ್ರಕರಣ: ಪ್ರೀತಿ ಬರಾರಗೆ ಜನವರಿ 31ರವರೆಗೆ ಗಡುವು
ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಕೋಬ್ರಾಗಡೆ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಭಾರತ...
ನ್ಯೂಯಾರ್ಕ್: ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಕೋಬ್ರಾಗಡೆ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಭಾರತ ಮೂಲದ ಅಮೆರಿಕದ ಸರ್ಕಾರಿ ಪ್ರಾಸಿಕ್ಯೂಟರ್ ಪ್ರೀತ್ ಬರಾರ ಅವರಿಗೆ ಅಮೆರಿಕದ ನ್ಯಾಯಾಲಯ ಜನವರಿ 31ರವರೆಗೆ ಗಡುವು ನೀಡಿದೆ.
ದೇವಯಾನಿ ಅವರು ತಮ್ಮ ಮೇಲೆ ಹೊರಿಸಲಾಗಿರುವ ವೀಸಾ ವಂಚನೆ ಪ್ರಕರಣವನ್ನು ಕೈಬಿಡುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ವಕೀಲರಾದ ಪ್ರೀತ್ ಬರಾರ್ ಅವರಿಗೆ ಅಮೆರಿಕದ ನ್ಯಾಯಾಲಯದ ಇದೇ ತಿಂಗಳ 31ರಗೊಳಗೆ ಉತ್ತರಿಸುವಂತೆ ಸೂಚಿಸಿದೆ.
ಜನವರಿ 14ರಂದು ದೇವಯಾನಿ ಪರ ವಕೀಲರಾದ ಡ್ಯಾನಿಯಲ್ ಅರ್ಶಾಕ್ ಅವರು, ದೇವಯಾನಿ ಅವರ ಮೇಲೆ ಹೊರಿಸಲಾಗಿರುವ ಜಾಮೀನು ಷರತ್ತುಗಳು, ದೋಷಾರೋಪ, ಹಾಗೂ ಬಹಿರಂಗ ಬಂಧನ ವಾರೆಂಟ್‌ನ್ನು ಕೈಬಿಡುವಂತೆ ಕೋರಿ, ಅಲ್ಲದೇ ತಮ್ಮ ಮೇಲೆ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮನವಿ ಮಾಡಿ 13 ಪುಟಗಳನ್ನೊಳಗೊಂಡ ಅರ್ಜಿಯನ್ನು ಅಮೆರಿಕದ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ದೇವಯಾನಿ ಅರ್ಜಿಗೆ ಅಮೆರಿಕದ ಸರ್ಕಾರ ಪ್ರತಿಕ್ರಿಯೆ ನೀಡಲು ಜನವರಿ 31ರವರೆಗೆ ಕಾಲವಕಾಶ ನೀಡಬೇಕೆಂದು ನ್ಯಾಯಾಲಯಕ್ಕೆ ಬರಾರ ಅವರು ಮನವಿ ಮಾಡಿದ್ದರು.