ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಮಣಿಶಂಕರ್ ಕಚೇರಿ ಧ್ವಂಸ

Vishwanath S
Updated On : 18 Jan 2014, 8:57 am

ಚೆನ್ನೈ: ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು "ಟೀ ಮಾರಲು ಸಮರ್ಥ" ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಅವರ ಕಚೇರಿ ಮೇಲೆ ಪುಂಡರ ಗುಂಪೊಂದು ಶನಿವಾರ ದಾಳಿ ಮಾಡಿದೆ.

ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗುವುದಿಲ್ಲ. ಅವರು ಒಪ್ಪಿದರೆ ಎಐಸಿಸಿ ಸಭೆಯಲ್ಲಿ ಟೀ ಮಾರಲು ಅವಕಾಶ ಮಾಡಿಕೊಡುತ್ತೇವೆ ಎಂಬ ಉದ್ಧಟತನದ ಹೇಳಿಕೆಯನ್ನು ಅಯ್ಯರ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಮಯಿಲದುತ್ತುರೈನಲ್ಲಿರುವ ಅವರ ಕಚೇರಿ ಮೇಲೆ ಇಂದು ದಾಳಿ ನಡೆದಿದ್ದು, ದಾಳಿಕೋರರು ಅಯ್ಯರ್ ಅವರ ಕಚೇರಿಯ ಕಿಟಕಿಗಳನ್ನು ಪುಡಿಪುಡಿ ಮಾಡಿದ್ದಾರೆ. ಅಲ್ಲದೆ ಕಚೇರಿಯ ನಾಮಫಲಕವನ್ನು ಕಿತ್ತು ಹಾಕಿದ್ದು, ಕಚೇರಿಯ ಗೇಟನ್ನು ಸಹ ಹಾನಿಗೊಳಿಸಿದ್ದಾರೆ.

ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ಬಂದ ನಂತರ ಈ ದಾಳಿ ನಡೆದಿದ್ದು, ಸ್ಥಳದಲ್ಲಿ ಬೀಗುವಿನ ವಾತಾವರಣ ಸೃಷ್ಠಿಯಾಗಿತ್ತು. ಹೀಗಾಗಿ ಸ್ಥಳದಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದ್ದು, ದಾಳಿ ನಡೆಸಿದ್ದು ಯಾರೆಂಬುದು ಇನ್ನು ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

21ನೇ ಶತಮಾನದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿ ಆಗುವುದಿಲ್ಲ. ಮೋದಿ ಎಐಸಿಸಿ ಸಭೆಯಲ್ಲಿ ನರೇಂದ್ರ ಮೋದಿ ಟೀ ಮಾರಲು ಸಮರ್ಥ ಎಂದಿದ್ದರು. ಅಲ್ಲದೆ ಮೋದಿ ಒಪ್ಪುವುದಾದರೆ ಎಐಸಿಸಿ ಸಭೆಯಲ್ಲಿ ಟೀ ಮಾರಲು ಅವಕಾಶ ಮಾಡಿಕೊಡುತ್ತೇವೆ ಎಂದು ಶುಕ್ರವಾರ ಸಾರ್ವಜನಿಕವಾಗಿ ಮಣಿಶಂಕರ್ ಅಯ್ಯರ್ ಉದ್ಧಟತನ ಮೆರೆದಿದ್ದರು.

ಅಯ್ಯರ್ ಅವರ ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿಯ ಅನೇಕ ರಾಜಕೀಯ ನಾಯಕರು ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ ಮೋದಿ ಅವರನ್ನು ಅಯ್ಯರ್ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement