ಶಶಿತರೂರ್ಗೆ ಸೋನಿಯಾ, ಪ್ರಧಾನಿ ಸಿಂಗ್ರಿಂದ ಸಂತಾಪ
ನವದೆಹಲಿ: ಕೇಂದ್ರ ಸಚಿವ ಶಶಿತರೂರ್ ಅವರ ಧರ್ಮಪತ್ನಿ ಸುನಂದಾ ಪುಷ್ಕರ್ ಅವರ ಅಂತ್ಯಕ್ರಿಯೆ ಬಳಿಕ ಶಶಿತರೂರನ್ನು ಭೇಟಿ ಮಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರು ಪುಷ್ಕರ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ನವದೆಹಲಿಯ ಲೀಲಾ ಹೊಟೇಲ್ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಶಶಿತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಅಂತ್ಯಕ್ರಿಯೆ ಇಂದು ದೆಹಲಿಯ ಲೋಧಿ ರಸ್ತೆಯಲ್ಲಿರುವ ಚಿತಾಗಾರದಲ್ಲಿ ನೇರವೇರಿತು.