ಸುನಂದಾ ಅವರದ್ದು ಅಸಹಜ, ಹಠಾತ್ ಸಾವು
ಶುಕ್ರವಾರ ಹೋಟೆಲ್‌ನಲ್ಲಿ ನಿಗೂಢ ಸಾವನ್ನಪಿರುವ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಮರಣೋತ್ತರ ಪರೀಕ್ಷೆ...
ನವದೆಹಲಿ: ಶುಕ್ರವಾರ ಹೋಟೆಲ್‌ನಲ್ಲಿ ನಿಗೂಢ ಸಾವನ್ನಪಿರುವ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಮರಣೋತ್ತರ ಪರೀಕ್ಷೆ ಇದೀಗ ಪೂರ್ಣಗೊಂಡಿದೆ.
ಎಐಐಎಂಎಸ್‌ನಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಎಐಐಎಂಎಸ್ ಫಾರೆನ್ಸಿಕ್ ಸಯನ್ಸ್ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ, ಟಾಕ್ಸಿಕೋಲದಿ ಮತ್ತು ಪಾಥೋಲಜಿಗೆ ಬೇಕಾದ ಸ್ಯಾಂಪಲ್ಸ್‌ಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.
ಸುನಂದಾ ಅವರ ಮೃತದೇಹದಲ್ಲಿ ಗಾಯಗಳು ಪತ್ತೆಯಾಗಿದ್ದು, ಎರಡು ದಿನಗಳ ನಂತರ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗವಾಗಲಿದೆ. ಸುನಂದಾ ಅವರದ್ದು ಅಸಹಜ ಮತ್ತು ಹಠಾತ್ ಸಾವು ಆಗಿದ್ದು, ನಾವು ಇದೀಗ ವೈದ್ಯಕೀಯ ತನಿಖೆಗಳ ಬಗ್ಗೆ ಗಮನ ಹರಿಸುತ್ತಿದ್ದೇವೆ ಎಂದು ಗುಪ್ತಾ ಹೇಳಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಸುನಂದಾ ಸಾವು ಬಗ್ಗೆ ವರದಿ ಸಿದ್ಧಪಡಿಸಲಿದ್ದು, ನಮ್ಮ ಅಭಿಪ್ರಾಯವನ್ನು ಹೇಳಲಿದ್ದೇವೆ ಎಂದು ಗುಪ್ತಾ ಮಾಧ್ಯಮದವರಿಗೆ ತಿಳಿಸಿದ್ದಾರೆ.