ಸುನಂದಾ ಪುಷ್ಕರ್ ಅನಾರೋಗ್ಯದಿಂದ ಬಳಲುತ್ತಿದ್ದರು
ನವದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ಶುಕ್ರವಾರ ರಾತ್ರಿ ಶಂಕಾಸ್ಪದವಾಗಿ ಅಸುನೀಗಿರುವ ಕೇಂದ್ರ ಸಚಿವ ಶಶಿ ತರೂರ್...
ನವದೆಹಲಿ: ನವದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ಶುಕ್ರವಾರ ರಾತ್ರಿ ಶಂಕಾಸ್ಪದವಾಗಿ ಅಸುನೀಗಿರುವ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ತರೂರ್ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಶಶಿ ತರೂರ್ ಅವರ ಗೆಳೆಯರೊಬ್ಬರು ಹೇಳಿದ್ದಾರೆ.
3 ದಶಕಗಳ ಕಾಲ ರಾಜತಾಂತ್ರಿಕರಾಗಿ ಕಾರ್ಯನಿರ್ವಹಿಸಿದ್ದ, ಶಶಿ ತರೂರ್ ಅವರ ಗೆಳೆಯ ಟಿ. ಪಿ. ಶ್ರೀನಿವಾಸನ್ ಸುನಂದಾ ಅವರ ಅನಾರೋಗ್ಯದ ಬಗ್ಗೆ ಶಶಿ ತರೂರ್ ತನ್ನಲ್ಲಿ ಹೇಳಿದ್ದರು ಎಂದಿದ್ದಾರೆ.
ಇತ್ತೀಚೆಗೆ ಸುನಂದಾ ಫ್ರಾನ್ಸ್‌ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಇದಾದ ನಂತರ ಹಲವಾರು ಬಾರಿ ಚೆಕ್ ಅಪ್ ಮಾಡಿಸಿಕೊಂಡಿದ್ದರು. ಸುನಂದಾ ಅವರಿಗೆ ತೀವ್ರವಾದ ಅನಾರೋಗ್ಯವಿದ್ದು, ಇದರಿಂದ ಶಶಿ ತುಂಬಾ ನೊಂದುಕೊಂಡಿದ್ದರು ಎಂದು ಶ್ರೀನಿವಾಸನ್ ಹೇಳಿದ್ದಾರೆ.
ಬಲ್ಲಮೂಲಗಳ ಪ್ರಕಾರ ತರೂರ್ ದಂಪತಿಗಳು ಇತ್ತೀಚೆಗೆ ಹಲವಾರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು.