ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದೆಹಲಿ ಸಿಎಂ ಅಪಹರಣಕ್ಕೆ ಉಗ್ರರ ಸಂಚು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಪಹರಣಕ್ಕೆ ಉಗ್ರರು ಸಂಚು ನಡೆಸಿದ್ದಾರೆಂದು ತಿಳಿದು ಬಂದಿದೆ...

Mainashree
Updated On : 19 Jan 2014, 4:22 am

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಪಹರಣಕ್ಕೆ ಉಗ್ರರು ಸಂಚು ನಡೆಸಿದ್ದಾರೆಂದು ತಿಳಿದು ಬಂದಿದೆ.

ಉಗ್ರ ಯಾಸಿನ್ ಭಟ್ಕಳ್ ಬಿಡುಗಡೆಗಾಗಿ ಅರವಿಂದ್ ಕೇಜ್ರಿವಾಲ್ ಅವರನ್ನು ಅಪಹರಿಸಲು ಉಗ್ರರು ಸಂಚು ನಡೆಸಿದ್ದಾರೆಂದು ಗುಪ್ತಚರ ಇಲಾಖೆಯಿಂದ ಮಾಹಿತಿ ಹೊರಬಿದ್ದಿದೆ.

ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಭಟ್ಕಳ್ ಬಿಡುಗಡೆಗಾಗಿ ವಿಮಾನ ಹೈಜಾಕ್ ಮಾಡಲು ಸಂಚು ರೂಪಿಸಿದೆ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ಈಗ ಮುಜಾಹಿದ್ದೀನ್ ಸಂಘಟನೆ ಅರವಿಂದ್ ಕೇಜ್ರಿವಾಲ್ ಅಪಹರಣಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಕೇಜ್ರಿವಾಲ್ ಅವರಿಗೆ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಯಾಸಿನ್ ಭಟ್ಕಳ್ ಬಿಡುಗಡೆಗಾಗಿ ಉಗ್ರರು ವಿಮಾನ ಹೈಜಾಕ್ ಮಾಡಲು ಸಂಚು ರೂಪಿಸಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೈ ಸೆಕ್ಯೂರಿಟಿ ಅಲರ್ಟ್ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement