ಬಿಜೆಪಿಗೆ ಮಿತಿ ಮೀರಿದ ನಂಬಿಕೆ ಒಳ್ಳೆಯದಲ್ಲ: ಅಡ್ವಾಣಿ
ಮುಂಬರುವ ಚುನಾವಣೆಯಲ್ಲಿ ಗೆಲುವು ಖಂಡಿತ ಎಂಬ ಅತಿವಿಶ್ವಾಸ ಇಟ್ಟುಕೊಳ್ಳಬೇಡಿ ಎಂದು ಬಿಜೆಪಿ ಹಿರಿಯ...
ನವದೆಹಲಿ: ಮುಂಬರುವ ಚುನಾವಣೆಯಲ್ಲಿ ಗೆಲುವು ಖಂಡಿತ ಎಂಬ ಅತಿವಿಶ್ವಾಸ ಇಟ್ಟುಕೊಳ್ಳಬೇಡಿ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಭಾನುವಾರ ಹೇಳಿದ್ದಾರೆ.
ಬಿಜೆಪಿ ಎಂದು ಅತಿವಿಶ್ವಾಸ ಇಟ್ಟುಕೊಳ್ಳಬಾರುದು ಎಂದು ಮೋದಿ, ಅತಿ ವಿಶ್ವಾಸದಿಂದ ಈಗಾಗಲೇ ಪೆಟ್ಟು ತಿಂದಾಗಿದೆ ಎಂದು ತಿಳಿಸಿದ್ದಾರೆ.
2004ರಲ್ಲಿ ನಡೆದ ಚುನಾವಣೆಯಲ್ಲಿ ನಮಗೆ ಗೆಲವು ಎಂಬ ಅತಿ ವಿಶ್ವಾಸದಿಂದಾಗಿ ಸೋಲು ಕಂಡೆವು. ಅಂದಿನ ದಿನ ಚುನಾವಣೆಯಲ್ಲಿ ಸೋಲಲು ಅತಿವಿಶ್ವಾಸವು ಒಂದು ಕಾರಣ ಎಂದು ಅಡ್ವಾಣಿ ವಿಷಾಧಿಸಿದ್ದಾರೆ.
ಆದ್ದರಿಂದ ಬಿಜೆಪಿ ಅತಿ ವಿಶ್ವಾಸದಿಂದ ಹೊರಬರಬೇಕು. ವಿಶ್ವಾಸವಿರಲಿ ಆದರೆ ಮಿತಿ ಮೀರಿದ ನಂಬಿಕೆ ಬೇಡ ಎಂದು ಅಡ್ವಾಣಿ ಕಿವಿಮಾತು ಹೇಳಿದ್ದಾರೆ.