ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸುನಂದಾ ಪುಷ್ಕರ್‌ಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇರಲಿಲ್ಲ

ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಆಸ್ಪತ್ರೆಯ...

Rashmi Kasaragodu
Updated On : 19 Jan 2014, 2:02 am

ನವದೆಹಲಿ: ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ಹೋಟೆಲ್ ಮೂಲಗಳ ಪ್ರಕಾರ ಸುನಂದಾ ಅವರು ಜನವರಿ 15ರಂದು ಒಬ್ಬಂಟಿಯಾಗಿ ಹೋಟೆಲ್‌ಗೆ ಬಂದಿದ್ದರು. ಮರುದಿನ ಶಶಿ ತರೂರ್ ಅವರಿಗೆ ಜತೆಯಾಗಿದ್ದರು.

ಶಶಿ ತರೂರ್ ಮತ್ತು ಸುನಂದಾ ವಿಮಾನದಲ್ಲಿ ಬರುವಾಗಲೇ ಜಗಳವಾಡಿದ್ದರು. ಅಲ್ಲಿ ಮಾಹಿತಿ ಮತ್ತು ಪ್ರಸಾರಾಂಗ ಸಚಿವ ಮನೀಷ್ ತಿವಾರಿ ಅವರನ್ನು ಸಮಾಧಾನ ಮಾಡಲು ಯತ್ನಿಸಿದ್ದರು ಎಂದು ಕೆಲವೊಂದು ಮೂಲಗಳು ಹೇಳಿವೆ.

ಆದಾಗ್ಯೂ, ಶಶಿ ತರೂರ್ ಅವರಿಗೆ ಪಾಕ್ ಪತ್ರಕರ್ತೆಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ಸುನಂದಾ ಬೇಸರಗೊಂಡಿದ್ದರು. ಮಾತ್ರವಲ್ಲದೆ ಪಾಕ್ ಪತ್ರಕರ್ತೆಯ ಜತೆ ಟ್ವಿಟರ್‌ನಲ್ಲಿ ಸುನಂದಾ ಕಿತ್ತಾಡಿಕೊಂಡಿದ್ದರು. ಇದಾದ ನಂತರ ಸುನಾಂದ ಶುಕ್ರವಾರ ರಾತ್ರಿ ಲೀಲಾ ಹೋಟೆಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷಾ ವರದಿ ಇನ್ನು ಬಹಿರಂಗವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement