ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಲ್ಪ್ರಾಕ್ಸ್ ಮಾತ್ರೆ ಸೇವನೆಯಿಂದ ಸುನಂದಾ ಸಾವು

ಬಾರಿ ಕುತೂಹಲ ಹುಟ್ಟಿಸಿದ್ದ ಹೈ ಪ್ರೋಫೈಲ್ ಪ್ರಕರಣ ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ಮರಣೋತ್ತರ ಪರೀಕ್ಷಾ ವರದಿ ಬಹಿರಂಗಗೊಂಡಿದ್ದು...

Vishwanath S
Updated On : 20 Jan 2014, 8:14 am

ನವದೆಹಲಿ: ಬಾರಿ ಕುತೂಹಲ ಹುಟ್ಟಿಸಿದ್ದ ಹೈ ಪ್ರೋಫೈಲ್ ಪ್ರಕರಣ ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ಮರಣೋತ್ತರ ಪರೀಕ್ಷಾ ವರದಿ ಬಹಿರಂಗಗೊಂಡಿದ್ದು, ಅತಿಯಾದ ಅಲ್ಪ್ರಾಕ್ಸ್ ಮಾತ್ರೆ ಸೇವನೆಯಿಂದ ಸುನಂದಾ ಸಾವು ಸಂಭವಿಸಿದೆ.

ದೆಹಲಿಯ ಲೀಲಾ ಹೊಟೇಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕೇಂದ್ರ ಮಾನವ ಸಂಪನ್ಮೂಲ ರಾಜ್ಯ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಮರಣೋತ್ತರ ಪರೀಕ್ಷಾ ವರದಿಯನ್ನು ಸೋಮವಾರ ವೈದ್ಯರು ಮ್ಯಾಜಿಸ್ಟ್ರೇಟ್ ಅವರಿಗೆ ಸಲ್ಲಿಸಿದ್ದಾರೆ.

ಸುನಂದಾ ಮರಣೋತ್ತರ ಪರೀಕ್ಷೆ ನಡೆಸಿದ ಏಮ್ಸ್ ಆಸ್ಪತ್ರೆಯ ಮೂವರು ವೈದ್ಯರ ತಂಡ ವರದಿ ಸಿದ್ಧಪಡಿಸಿದ್ದು, ವರದಿಯಲ್ಲಿ ಸುನಂದಾ ಅವರು ಒತ್ತಡ ನಿವಾರಣೆಗೆ ತೆಗೆದುಕೊಳ್ಳುವ ಮಾತ್ರೆಯನ್ನು ಅತಿಯಾಗಿ ಸೇವನೆ ಮಾಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಒತ್ತಡ ನಿವಾರಣೆಗಾಗಿ 30 ಅಲ್ಪ್ರಾಕ್ಸ್ ಮಾತ್ರೆಗಳನ್ನು ಸುನಂದಾ ಅವರು ತರಿಸಿಕೊಂಡಿದ್ದಾರೆ. ತನಿಖೆ ವೇಳೆ ಅವರು ತಂಗಿದ್ದ ಕೋಣೆಯಲ್ಲಿ 3 ಮಾತ್ರೆಗಳು ಮಾತ್ರ ಪತ್ತೆಯಾಗಿದ್ದು, ಇನ್ನುಳಿದ ಮಾತ್ರೆಗಳನ್ನು ಅವರು ತೆಗೆದುಕೊಂಡಿದ್ದಾರೆ. ಹೀಗಾಗಿ ಅಧಿಕ ಪ್ರಮಾಣದ ಮಾತ್ರೆ ದೇಹ ಸೇರಿದ್ದರಿಂದ ಅವರ ಸಾವು ಸಂಭವಿಸಿದೆ ಎಂದು ವೈದ್ಯರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement