ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೇಜ್ರಿವಾಲ್ ಧರಣಿ: ಮುಖ್ಯಾಂಶಗಳು

ಐವರು ಭ್ರಷ್ಟ ಪೊಲೀಸ್ ಅಧಿಕಾರಿಗಳ ವಜಾಕ್ಕೆ ಆಗ್ರಹಿಸಿ ದೆಹಲಿ ಮುಖ್ಯಮಂತ್ರಿ ...

Vishwanath S
Updated On : 20 Jan 2014, 7:47 am

ನವದೆಹಲಿ: ಐವರು ಭ್ರಷ್ಟ ಪೊಲೀಸ್ ಅಧಿಕಾರಿಗಳ ವಜಾಕ್ಕೆ ಆಗ್ರಹಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರೈಲ್ ಭವನ್ ಆವರಣದಲ್ಲಿ ಧರಣಿ.

6.21: ಧರಣಿ ನಿರತ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸರ್ಕಾರಿ ಕಡತಗಳಿಗೆ ಧರಣಿ ಸ್ಥಳದಲ್ಲೇ ಸಹಿ ಹಾಕಿದ್ದಾರೆ. ಪ್ರತಿಭಟನೆಯಿಂದ ಸರ್ಕಾರಿ ಕೆಲಸಗಳಿಗೆ ಯಾವುದೇ ತೊಂದರೆಯಾಗಬಾರದು ಎಂದು ಅವರು ಹೇಳಿದ್ದಾರೆ.

6.16: ಧರಣಿ ವೇಳೆ ಪೊಲೀಸರು ಆಪ್ ಶಾಸಕ ಅಖಿಲೇಶ್ ತ್ರಿಪಾಠಿಯವರನ್ನು ಥಳಿಸಿದ್ದಾರೆ. ಅಲ್ಲದೆ ಸಾರಿಗೆ ಸಚಿವ ಸೌರಭ್ ಭಾರದ್ವಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆಯಲು ಕಾರಣವೇನು? ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

6.14: 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ-ಕೇಜ್ರಿವಾಲ್

6.05: ದೆಹಲಿಯ ಪೊಲೀಸ್ ಇಲಾಖೆ ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಪೊಲೀಸ್ ಇಲಾಖೆ ಮೇಲೆ ನಿಯಂತ್ರಣ ಇರುವುದಿಲ್ಲ. ದೆಹಲಿಯಲ್ಲಿ ವಿಚಿತ್ರ ಸ್ಥಿತಿ ಹೊಂದಿದೆ ಎಂದು ನಿತೀಶ್ ಕುಮಾರ್ ಪತ್ರಕರ್ತರಿಗೆ ತಿಳಿಸಿದ್ದಾರೆ.

6.01: ಪೊಲೀಸ್ ಇಲಾಖೆಯನ್ನು ದೆಹಲಿ ಸರ್ಕಾರದ ಅಧೀನಕ್ಕೆ ತರುವುದಾಗಿ ಎಎಪಿ ಚುನಾವಣಾ ಪ್ರಣಾಳಿಕೆಯ ಪ್ರಮುಖ ಆಶ್ವಾಸನೆಗಳಲ್ಲಿ ಒಂದಾಗಿತ್ತು ಎಂದು ಎಎಪಿ ಮುಖಂಡ ಯೋಗೇಂದ್ರ ಯಾದವ್ ಹೇಳಿದ್ದಾರೆ.

5.44: ಅರವಿಂದ್ ಕೇಜ್ರಿವಾಲ್ ತಮ್ಮ ಟ್ವೀಟ್‌ನಲ್ಲಿ, ಧರಣಿ ನಿರತ ಸಚಿವ ಹಾಗೂ ಶಾಸಕರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

5.36: ದೆಹಲಿ ಬೀದಿಗಳಲ್ಲಿ ಆಪ್ ರಚಿಸಿದ ಗೊಂದಲದಲ್ಲಿ ಕಾಂಗ್ರೆಸ್ ಮೂಕ ಪ್ರೇಕ್ಷಕರಂತೆ ನಿಂತು ತನ್ನ ಅಸಮರ್ಥತೆಯನ್ನು ತೋರಿಸಿದೆ ಎಂದು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಹಿರಿಯ ನಾಯಕಿ ನಿರ್ಮಲ ಸೀತಾರಾಮನ್ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರೆ.

5.22: ಧರಣಿ ನಿರತ ಕೇಜ್ರಿವಾಲ್ ಅವರಿಗೆ ಧರಣಿ ನಿಲ್ಲಿಸಿ, ಜಂತರ್ ಮಂತರ್‌ನಲ್ಲಿ ಧರಣಿ ಮಾಡುವಂತೆ ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ.

5.15: ಸಣ್ಣ ಬೇಡಿಕೆ ಈಡೇರಿಕೆಗಾಗಿ ದೆಹಲಿ ಮುಖ್ಯಮಂತ್ರಿಗಳು ಧರಣಿ ಕೂರುವ ಸ್ಥಿತಿ ನಿರ್ಮಾಣವಾಗಿದ್ದು, ಭ್ರಷ್ಟ ಪೊಲೀಸ್ ಅಧಿಕಾರಿಗಳಿಂದ ದೆಹಲಿ ಜನತೆ ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ಧರಣಿಯ ಅವಶ್ಯಕತೆಯಿದೆ ಎಂದು ಎಎಪಿ ಮುಖಂಡ ಯೋಗೇಂದ್ರ ಯಾದವ್, ಕೇಜ್ರಿವಾಲ್ ಅವರು ಧರಣಿಯನ್ನು ಸಮರ್ಥಿಸಿಕೊಂಡಿದ್ದಾರೆ.

5.07: ಕಾನೂನು ಬದಲಾಯಿಸಲು ಬಯಸಿದರೆ ಆಪ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿ, ಅದನ್ನು ಬಿಟ್ಟು ಈ ರೀತಿ ರಸ್ತೆಯಲ್ಲಿ ಧರಣಿ ಕೂರುವುದು ಯೋಗ್ಯವಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್

5.05 ಸಾಕ್ಷ್ಯ ನಾಶಪಡಿಸಿದ ಆರೋಪ ಹಿನ್ನೆಲೆಯಲ್ಲಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರಿಗೆ ಬಾರ್ ಕೌನ್ಸಿಲ್‌ನಿಂದ ನೋಟಿಸ್ ಜಾರಿಮಾಡಿದ್ದು, ನೋಟಿಸ್‌ಗೆ ಫೆಬ್ರವರಿ 7 ರೊಳಗೆ ಉತ್ತರಿಸುವಂತೆ ಸೂಚನೆ

4.54: ಧರಣಿ ಕೂರುವುದನ್ನು ಬಿಟ್ಟು, ಆಡಳಿತ ನಿರ್ವಹಣೆ ಕಡೆ ಎಎಪಿ ಗಮನ ಹರಿಸಬೇಕಿದೆ ಎಂದು ಕೇಂದ್ರ ವಾರ್ತಾ ಸಚಿವ ಮನೀಶ್ ತಿವಾರಿ

4.49: ದೆಹಲಿ ಜನತೆ ಎಎಪಿಗೆ ಮತ ನೀಡಿದ್ದು, ಸುಗಮ ಆಡಳಿತ ನೀಡಲಿ. ಅದನ್ನು ಬಿಟ್ಟು ಎಎಪಿ ಧರಣಿ ಮಾಡಿಕೊಂಡು ಅವರ ನಂಬಿಕೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಕಿರಣ್ ಬೇಡಿ ಹೇಳಿದ್ದಾರೆ.

3.37: ರೈಲ್ ಭವನದ ಸುತ್ತಲು ಎಎಪಿ ಕಾರ್ಯಕರ್ತರು ಅಪಾರ ಪ್ರಮಾಣದಲ್ಲಿ ಜಮಾಗೊಂಡಿದ್ದರಿಂದ ಅವರನ್ನು ನಿಯಂತ್ರಿಸಲು ರ್ಯಾಪಿಡ್ ಆಕ್ಷನ್ ಪಡೆ ನಿಯೋಜನೆ

2.17: ದೆಹಲಿ ಪೊಲೀಸರು ಅಪ್ರಾಮಾಣಿಕತೆಯಿಂದ ದೆಹಲಿ ಮಹಿಳೆಯರು ಅಸುರಕ್ಷಿತವಾಗಿದ್ದಾರೆ- ಯೋಗೇಂದ್ರ ಯಾದವ್

1.51: ಅಶಿಸ್ತಿನ ರಾಜಕೀಯ ನಾಯಕರಿಂದ ದೆಹಲಿ ನಲುಗುತ್ತಿದೆ-ಕಿರಣ್ ಬೇಡಿ

1.47: ನಾನು ಅರಾಜಕತವಾದಿಯಲ್ಲ-ಕೇಜ್ರಿವಾಲ್

1.05: ಕೇಜ್ರಿವಾಲ್ ಅರಾಜಕತವಾದಿ ಎಂದು ದೇಶದ ಜನತೆಗೆ ತಿಳಿದಿದೆ-ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ

1.05: ಭ್ರಷ್ಟ ಪೊಲೀಸರ ವಿರುದ್ದ ನ್ಯಾಯಾಂಗ ತನಿಖೆಗೆ ಉಪರಾಜ್ಯಪಾಲರು ಆದೇಶಿಸಿದ್ದು, ಇದನ್ನು ಕೇಜ್ರಿವಾಲ್ ತಿಳಿದುಕೊಳ್ಳಲಿ-ಶಿಂಧೆ

12.10: ನ್ಯಾಯಾಂಗ ತನಿಖೆ ಮುಗಿಯುವವರೆಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಿಲ್ಲ-ಶಿಂಧೆ

10.45: ರೈಲ್ ಭವನದ ಬಳಿ ಧರಣಿ ಕೂರಲು ಕೇಜ್ರಿವಾಲ್ ನಿರ್ಧಾರ

10.15: ರೈಲ್ ಭವನ್ ಹತ್ತಿರ ಸಿಎಂ ಕೇಜ್ರಿವಾಲ್ ವಾಹನ ತಡೆ ಹಿಡಿದ ಪೊಲೀಸರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement